ಸಣ್ಣ ಪ್ರಾಯದಲ್ಲೇ ಕುರಾನ್ ಕಂಠಪಾಠ ಮಾಡಿ ಹಾಫಿಲ್ ಆಗಿರುವ ಶಿರ್ತಾಡಿ ಮಕ್ಕಿ ದೋಣಿಬಾಗಿಲಿನ ಇಬ್ರಾಹಿಂ ಅವರ ಪುತ್ರ, ಕುಂಬ್ರದ ಶಂಸುಲ್ ಉಲಮಾ ಮೆಮೋರಿಯಲ್ ಹಿಫ್ಲ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಇಲಿಯಾಸ್ ಅವರನ್ನು ಮಕ್ಕಿ ಮಸೀದಿಯಲ್ಲಿ ಭಾನುವಾರ ನಡೆದ ಸ್ವಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ನೇತೃತ್ವವನ್ನು ಪೆರಿಯಪಾದೆ ಸಯ್ಯಿದ್ ಮುಹಮ್ಮದ್ ಅಲ್ ಹಾದಿ ಫೈಝಿ ಅಲ್ ಮ ಅಬರಿ ತಂಙಳ್ ಅವರು ವಹಿಸಿದ್ದರು.
ವಾಲ್ಪಾಡಿ ಮಸೀದಿ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ದಫ್ ಮಕ್ಕಳ ಸಮವಸ್ತ್ರವನ್ನು ವಿತರಿಸಲಾಯಿತು.
ಮಸೀದಿ ಕಮಿಟಿಯ ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಕಾರ್ಯದರ್ಶಿ ಝಕರಿಯಾ ಯೂಸುಫ್, ಖಾದರ್ ದೋಣಿಬಾಗಿಲು,ಇಬ್ರಾಹಿಂ ದೋಣಿಬಾಗಿಲು, ಇಸ್ಮಾಯಿಲ್ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್, ದಾರುಸ್ಸಲಾಮ್ ಯಂಗ್ ಮೆನ್ಸ್ ಅಧ್ಯಕ್ಷ ಅಬ್ದುಲ್ ಕರೀಮ್, ಜಮಾಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಕ್ಕಿ ಮಸೀದಿಯ ಖತೀಬರಾದ ಸಿರಾಜುದ್ದೀನ್ ಫೈಝಿ ಅಲ್ ಮ ಅಬರಿ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.










