ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವ್ಯಾಪ್ತಿಗೆ ಬರುವ ಮೂಡುಬಿದಿರೆ ಉಪವಿಭಾಗದ ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಯ ಅಧ್ಯಕ್ಷರಾಗಿ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಎಂಟು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ.

ಸಲಹಾ ಸಮಿತಿಯ ಸದಸ್ಯರಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕವಿಪ್ರನಿನಿ, ಸಹಾಯಕ ಇಂಜಿನಿಯರ್,ಅನೀಶ್ ಡಿಸೋಜ ಬೆಳುವಾಯಿ,ಜಯಕುಮಾರ್ ಸಂಪಿಗೆ,ಹಾಜಿರಾ ಮಕ್ಕಿ,ಶಿರ್ತಾಡಿ,ದಯಾನಂದ ದರೆಗುಡ್ಡೆ, ಬಾಲಕೃಷ್ಣ ಮಾರ್ಪಾಡಿ ಅವರು ನೇಮಕಗೊಂಡಿದ್ದಾರೆ.










