ಮೂಡುಬಿದಿರೆ ವಲಯ ಮೊಬೈಲ್ ರಿಟೈಲರ್ಸ್ ವತಿಯಿಂದ ಮೂರನೇ ಆವೃತ್ತಿಯ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಪಂದ್ಯಾಟವನ್ನು ಉದ್ಘಾಟಿಸಿದ್ದು ಪುರಸಭಾ ಮಾಜಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಸಹಿತ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.



ಐದು ತಂಡಗಳ ನಡುವೆ ನಡೆದ ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ ಫಾರೂಕ್ ಅವರ ಸಾರಥ್ಯದ ಅಲ್ ಝೈನ್ ಪ್ಯಾಂಥರ್ಸ್ ಪ್ರಥಮ ಹಾಗೂ ಇರ್ಫಾನ್ ಬೆದ್ರ ( ಬೆದ್ರ ಮೀಡಿಯಾ) ಸಾರಥ್ಯದ ಟೀಮ್ ಬೆದ್ರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಅರ್ಷದ್ ಶಿರ್ತಾಡಿ ಉತ್ತಮ ದಾಂಡಿಗ, ರೂಪೇಶ್ ಉತ್ತಮ ಎಸೆತಗಾರ,ಸುಹೈಲ್ ಪುತ್ತಿಗೆ ಸರಣಿಶ್ರೇಷ್ಠ ಹಾಗೂ ನೌಷಾದ್ ಕೆರೆಬಳಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಶೆಣೈ, ಖಜಾಂಚಿ ರಾಘವೇಂದ್ರ ಪ್ರಭು, ಮೂಡುಬಿದಿರೆ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಫ್ವಾನ್ ಹಮೀದ್,ಕಾರ್ಯದರ್ಶಿ ಅವಿನಾಶ್ ಪೂಜಾರಿ, ಹನೀಫ್ ರಹ್ಮಾನಿಯಾ ಬಹುಮಾನ ವಿತರಿಸಿದರು.
ಶಫೀಕ್, ಫಾರೂಕ್, ಶ್ರೀನಿತ್,ಲ್ಯಾನ್ಸಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ , ಪ್ರಿಶಾ ಪಿ.ಪೂಜಾರಿ, ಡೆಲ್ಲಾ ಝೀನತ್,ಟೆಲ್ಮಾ ಫೆಮಿನಾ ಸಾಂತ್ಮಯೋರ್ ಹಾಗೂ ಪ್ರೇಮ್ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಸಮದ್ ಕಾಟಿಪಳ್ಳ, ರಫೀಝ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು.











