ಮೂಡುಬಿದಿರೆ ಹಾಗೂ ಆಸುಪಾಸಿನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಇದರ ಏಳನೇ ಶಾಖೆ ನಾಳೆ ಬೆಳಿಗ್ಗೆ 11 ಗಂಟೆಗೆ ರಾಯಿ-ಕೊಯಿಲಾ ದ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರದಲ್ಲಿ ಶುಭಾರಂಭಗೊಳ್ಳಲಿದೆ.

ನೃತ್ಯ ನಿರ್ದೇಶಕ, ಕೊರಿಯೋಗ್ರಾಫರ್ ಎಸ್.ಅನೀಶ್ ಕುಮಾರ್ ಅವರ ಸಾರಥ್ಯದಲ್ಲಿ ಈಗಾಗಲೇ ಮೂಡುಬಿದಿರೆ, ಶಿರ್ತಾಡಿ, ವೇಣೂರು, ಬೆಳುವಾಯಿ, ಕಡಂದಲೆ ಹಾಗೂ ಹೊಸ್ಮಾರಿನಲ್ಲಿ ಡ್ಯಾನ್ಸ್ ಕ್ಲಾಸ್ ಗಳಿದ್ದು ರಾಯಿ,ಕೊಯಿಲ ಹಾಗೂ ಅರಳ ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ನಾಳೆ ಏಳನೇ ಶಾಖೆ ಪ್ರಾರಂಭಗೊಳ್ಳಲಿದೆ.
ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್ ಅಧ್ಯಕ್ಷ ಲ.ಪ್ರಕಾಶ್ ಸಿಂಪೋನಿ ಹಾಗೂ ಮಾಜಿ ಅಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ ಅವರು ನೂತನ ನೃತ್ಯ ತರಗತಿಯನ್ನು ಉದ್ಘಾಟಿಸಲಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದ ಅಧ್ಯಕ್ಷರಾಗಿರುವ ಶೇಖರ್ ಅಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ನ್ಯೂ ದುರ್ಗಾ ಡಿಜಿಟಲ್ ನ ಸಂತೋಷ್ ಕುಮಾರ್,ಕೈತ್ರೋಡಿ ಕೊರಗಜ್ಜ ಕ್ಷೃತ್ರದ ಲೋಕೇಶ್ ಕೈತ್ರೋಡಿ,ಮೂಡುಬಿದಿರೆ ಸುಹಾನ್ ಫ್ಲೋರಿಂಗ್ಸ್ ನ ಸುಶಾಂತ್ ಕರ್ಕೇರ, ರಾಯಿ ಮಹಾಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಸಂತೋಷ್ ಶಿವನಗರ,ಜಾನ್ ಡಿಸೋಜ ಮೂಡುಬಿದಿರೆ,ಅರಳ ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಕುಲಾಲ್,ಬಾಂಧವ್ಯ ಮಹಿಳಾ ಮಂಡಳಿಯ ಶ್ರೀಮತಿ ಶೋಭಾ,ಕೊಯಿಲಾ ಗುರುಗಣೇಶ್ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಕೊಯಿಲಾ,ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಚಿತ್ರಾ ರಮೇಶ್,ಮೂಡುಬಿದಿರೆ ಯುವವಾಹಿನಿ ಅಧ್ಯಕ್ಷ ಮುರಳೀಧರ ಕೋಟ್ಯಾನ್,ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು,ಬದನಾಡಿ ನಾಗಸುಬ್ರಹ್ಮಣ್ಯ ಭಜನಾ ಮಂಡಳಿಯ ರವೀಂದ್ರ ಪೂಜಾರಿ ಹಾಗೂ ಪತ್ರಕರ್ತ ಅಶ್ರಫ್ ವಾಲ್ಪಾಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸೆಮಿ ಕ್ಲಾಸಿಕಲ್,ಫಿಲ್ಮ್, ಡ್ಯಾನ್ಸ್ ಫಿಟ್ನೆಸ್,ಜಿಮ್ನಾಸ್ಟಿಕ್ಸ್,ಬಾಲಿವುಡ್,ಫ್ರೀ ಸ್ಟೈಲ್,ಇಂಡಿಯನ್ ಹಿಫಾಪ್,ವೆಸ್ಟರ್ನ್ ಹಾಗೂ ಸೆಮಿ ಫೋಕ್ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದೆಂದು ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಮುಖ್ಯಸ್ಥ ಅನೀಶ್ ಅವರು ತಿಳಿಸಿದ್ದಾರೆ.
ಆರೂ ಕಡೆಗಳಲ್ಲೂ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿದ್ದು ಈ ಹೊಸ ಶಾಖೆಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿರಲಿದೆ ಎಂದು ಹೇಳಿರುವ ಅನೀಶ್ ಅವರು ಎಂಟನೇ ಶಾಖೆ ಶೀಘ್ರದಲ್ಲೇ ವಾಮಂಜೂರಿನಲ್ಲಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.










