2025- 26 ನೇ ಸಾಲಿನ ‘ ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ’ ಪ್ರಶಸ್ತಿಗೆ ಅಳಿಯೂರು ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ.ಆಯ್ಕೆಯಾಹಿದೆ.
ಶಾಸಕ ಉಮಾನಾಥ ಕೋಟ್ಯಾನ್ ಅವರ ಸಹಕಾರದಲ್ಲಿ ಪ್ರದೀಪ್ ಕುಮಾರ್ ಅವರ ಅಧ್ಯಕ್ಷತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳ ಮೂಲಕ ಗಮನಸೆಳೆದಿರುವ ಅಳಿಯೂರು ಹೈಸ್ಕೂಲ್ ಎಸ್.ಡಿ.ಎಂ.ಸಿ. ಅರ್ಹವಾಗಿಯೇ ಈ ಪ್ರಶಸ್ತಿಗೆ ಆಯ್ಕೆಯಾಗಿದೆ.
ವಾಲ್ಪಾಡಿ ಪಂಚಾಯತ್ ಮಾಜಿ ಅಧ್ಯಕ್ಷರೂ ಆಗಿರುವ ಪ್ರದೀಪ್ ಕುಮಾರ್ ಅವರು ಈ ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಬಳಿಕ ಸಮಗ್ರವಾಗಿ ಅಭಿವೃದ್ಧಿ ಕಂಡಿದೆ.
ಫಲಿತಾಂಶದಲ್ಲಿ ಕೂಡಾ ಒಳ್ಳೆಯ ಫಲಿತಾಂಶ ಪಡೆಯುತ್ತಿರುವ ಅಳಿಯೂರು ಹೈಸ್ಕೂಲ್ ನ ಪ್ರತಿಯೊಂದು ಕೆಲಸಗಳಲ್ಲೂ ಎಸ್ಡಿಎಂಸಿಯವರು ಕೈಜೋಡಿಸಿ ಅಭಿವೃದ್ಧಿಗೆ ಸಹಕರಿಸಿದ್ದಾರೆ.
ಅತ್ಯುತ್ತಮ ಎಸ್.ಡಿ.ಎಂ.ಸಿಯಾಗಿ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ ಅಧ್ಯಕ್ಷರು, ಸದಸ್ಯರನ್ನು ವಿದ್ಯಾರ್ಥಿಗಳ ಪೋಷಕರು,ಶಿಕ್ಷಕ ವೃಂದ ಹಾಗೂ ವಿದ್ಯಾಭಿಮಾನಿಗಳು ಅಭಿನಂದಿಸಿದ್ದಾರೆ.










