ಮೂಡುಬಿದಿರೆಯ ನೂತನ ಕಂದಾಯ ನಿರೀಕ್ಷಕರಾಗಿ ರವಿಪ್ರಸಾದ್ ಎಸ್.ಮಲ್ಯ ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಇಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಮಂಜುನಾಥ್ ಅವರು ಆಹಾರ ನಿರೀಕ್ಷಕರಾಗಿ ಮೂಲ್ಕಿಗೆ ವರ್ಗಾವಣೆಗೊಂಡಿದ್ದಾರೆ.
ರವಿಪ್ರಸಾದ್ ಮಲ್ಯ ಅವರು ಮೂಲತಃ ಮೂಡುಬಿದಿರೆ ಸಮೀಪದ ಮೂಡುಕೊಣಾಜೆಯವರಾಗಿದ್ದು ಕುಪ್ಪೆಪದವು,ಕಾವೂರು ,ಸುರತ್ಕಲ್ ಮುಂತಾದೆಡೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೂಡುಬಿದಿರೆಯಲ್ಲಿ ಆಹಾರ ನಿರೀಕ್ಷಕರಾಗಿದ್ದ ಅವರನ್ನು ಕಂದಾಯ ನಿರೀಕ್ಷಕರಾಗಿ ಸರಕಾರ ಆದೇಶ ಹೊರಡಿಸಿದ್ದು ಇಂದು ಹಿಂದಿನ ಕಂದಾಯ ನಿರೀಕ್ಷಕ ಮಂಜುನಾಥ್ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ.








































