ರಸ್ತೆ ಮಧ್ಯಕ್ಕೆ ತಂದು ಹಾಕಿದ ‘ ಕಜವು’ ! *ತೆರವುಗೊಳಿಸಿ ಅಪಘಾತ ತಪ್ಪಿಸಿದ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ

Picture of Namma Bedra

Namma Bedra

Bureau Report

ಪಡುಮಾರ್ನಾಡಿನ ವ್ಯಕ್ತಿಯೊಬ್ಬ ಅದ್ಯಾವುದೋ ನೆರೆಕರೆಯ ಕಜವು ಗಲಾಟೆಯಿಂದ ನೆರೆಮನೆಯವರು ತನ್ನ ಮನೆಯೆದುರು ಕಸ ತಂದು ಹಾಕಿದರೆಂದು ಆ ಕಸವನ್ನು ಮುಖ್ಯರಸ್ತೆಗೇ ತಂದು ಹಾಕಿದ್ದ.
ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಅವರ ಮುಂದೆಯೇ ಈ ಘಟನೆ ನಡೆದಿತ್ತು.
ಮೈಬುಡ್ದುಕೊಂಡು ,ಕೇವಲ ಚಡ್ಡಿಧಾರಿಯಾಗಿ ಬಂದಿದ್ದ ಆ ಸ್ಟ್ರಾಂಗ್ ಪರ್ಸನತ್ತಿರ ‘ ಅಲ್ಲ ಮಾರಯಾ, ಈ ಕಜವನ್ನು ಇಲ್ಲೇಕೆ ತಂದು ಹಾಕಿರುವೆ? ಎಂದು ಕೇಳಿದಾಗ ‘ ನನ್ನ ನೆರೆಮನೆಯವರು ನನ್ನ ಮನೆಮುಂದೆ ತಂದು ಹಾಕಿದರು,ಅದಕ್ಕೆ ನಾನು ರಸ್ತೆಗೆ ತಂದು ಹಾಕಿದ್ದು, ಪಬ್ಲಿಕ್ ಗೆ ಗೊತ್ತಾಗಲಿ’ ಅಂತ ಸ್ಟೇಟ್ ಮೆಂಟ್ ನೀಡಿದ್ದಾನೆ.
ಅವನದ್ದೆಂತ ತಿಗಲ್ದಕಟ್ಟದ ಹೇಳಿಕೆಯಾ ಅದು ?
ನೆರೆಮನೆಯವರು ತಂದು ಹಾಕಿದರೆ ಅವರ ಮನೆಮುಂದೆಯೇ ಕೊಂಡುಹೋಗಿ ಹಾಕು,ಇಲ್ಲೇಕೆ ಹಾಕಿದ್ದು? ಎಂದು ವಿಚಾರಿಸಿ ಆತನ ಸುಂದರವಾದ ಮೋನೆಯನ್ನು ಚಿತ್ರೀಕರಿಸಲು ಮಂದಾದಾಗ ಆತ ಬೆರಿಪಾಡ್ದ್ ಅಲ್ಲಿಂದ ಪರಾರಿಯಾಗಿದ್ದಾನೆ.


ಬೈಕ್ ಸವಾರರಿಗೆ ಇದು ಅಪಾಯ, ಅಪಘಾತ ಸಂಭವಿಸಬಹುದೆಂದು ಯೋಚಿಸಿದ ರಮೇಶ್ ಶೆಟ್ರು ಆ ಕಜವುರಾಶಿಯನ್ನು ಬದಿಗೆ ಸರಿಸಿ ಪಿಡಿಒ ಅವರಿಗೆ ಕಂಪ್ಲೇಂಟು ಕೊಟ್ಟಿದ್ದಾರೆ.
‘ಕಜವು’ ವಿರುದ್ಧ ಪ್ರಕರಣ ದಾಖಲಾಗಿ ಫೈನ್ ಬೀಳಬಹುದು !

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top