ಯುದ್ಧದ ಎಫೆಕ್ಟ್ ಹೊಟೇಲ್ ಗಳಿಗೂ ತಟ್ಟಿದೆ. ಅಡುಗೆ ಸಿಲಿಂಡರ್ ಬಂದ್ ಆಗಿರುವ ಕಾರಣ ಕೆಲವು ಹೊಟೇಲ್ ಗಳೂ ತಾತ್ಕಾಲಿಕವಾಗಿ ಬಂದ್ ಆಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿದೆ.
ಮನೆಗಳಲ್ಲಾದರೂ ಹಿಂದಿನಂತೆ ಒಲೆ,ಕಟ್ಟಿಗೆ ಬಳಸಿ ಅಡುಗೆ ತಯಾರಿಸಬಹುದು.ಆದರೆ, ಹೊಟೇಲ್ ಗಳಲ್ಲಿ ಇದು ಅಸಾಧ್ಯ. ಹೀಗಾಗಿ ಬೆಂಗಳೂರಿನ ಕೆಲವೊಂದು ಹೊಟೆಲ್ ಗಳು ಈಗಾಗಲೇ ಬಂದ್ ಆಗಿದ್ದು ಈ ಸಮಸ್ಯೆ ಮೂಡುಬಿದಿರೆಯಲ್ಲೂ ಕಾಣತೊಡಗಿದೆ.
ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹೊಟೆಲ್ ,ಫಾಸ್ಟ್ ಫುಡ್ ಸ್ಟಾಲ್ ಗಳೂ ಸದ್ಯದಮಟ್ಟಿಗೆ ಬಂದ್ ಆಗಲಿದೆ.
ಇದು ರಾಜ್ಯದ ಎಲ್ಲ ಕಡೆಗಳಿಗೂ ತಟ್ಟಿದ ಬಿಸಿ. ಬೆದ್ರದ ಕೆಲವು ಫೇಮಸ್ ಹೊಟೆಲ್ ಗಳೂ ಗ್ಯಾಸ್ ಟ್ರಬಲ್ ಎದುರಿಸುತ್ತಿದೆ.










