ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸಿರುವ ಅಬ್ಬಾಸ್ ಫೈಝಿ ದಿಡುಪೆ, ಮಕ್ಕಿ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸಿರುವ ಸಿರಾಜುದ್ದೀನ್ ಫೈಝಿ ಹಾಗೂ ವಾಲ್ಪಾಡಿ ಮದರಸದ ಸದರ್ ಮುಅಲ್ಲಿಮ್ ಆಗಿ ಸೇವೆ ಸಲ್ಲಿಸಿರುವ ಅಬ್ದುಲ್ ಹಕೀಮ್ ಅಶ್ರಫಿ ಅವರನ್ನಿಂದು ವಾಲ್ಪಾಡಿ ಮಸೀದಿಯಲ್ಲಿ ಬೀಳ್ಕೊಡಲಾಯಿತು.
ಜಮಾತ್ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಕಾರ್ಯದರ್ಶಿ ಝಕರಿಯಾ ಯೂಸುಫ್, ಖಜಾಂಚಿ ಉಬೈದುಲ್ಲಾ, ಮುಅಝ್ಜಝಿನ್ ಹನೀಫ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಇಹ್ಯಾವುಲ್ ಇಸ್ಲಾಂ ಸ್ವಲಾತ್ ಕಮಿಟಿ ಅಧ್ಯಕ್ಷ ಇರ್ಷಾದ್, ಕಾರ್ಯದರ್ಶಿ ರಿಯಾಝ್, ಮಕ್ಕಿ ದಾರುಸ್ಸಲಾಮ್ ಯಂಗ್ ಮೆನ್ಸ್ ಅಧ್ಯಕ್ಷ ಕರೀಮ್, ರಮೀಝ್ ವಾಲ್ಪಾಡಿ, ಇಬ್ರಾಹಿಂ, ಮುಸ್ತಫಾ ಹನೀಫಿ, ಜಮಾಲುದ್ದೀನ್, ಖಾದರ್ ದೋಣಿಬಾಗಿಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










