ಆನಡ್ಕ ದಿನೇಶ್ ಕುಮಾರ್ ಇನ್ನು ನೆನಪು ಮಾತ್ರ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಜೈನ ಬಸದಿಗಳ ಮೊಕ್ತೇಸರರೂ, ಜೈನ್ ಮಿಲನ್ ನ ನಿಕಟಪೂರ್ವ ಅಧ್ಯಕ್ಷರೂ, ರಾಜ್ಯಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಆಟಗಾರ ಹಾಗೂ ಹಲವು ಸೇವಾ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಆನಡ್ಕ ದಿನೇಶ್ ಕುಮಾರ್ ( 59) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಪುತ್ತಿಗೆ ಗ್ರಾಮದ ಆನಡ್ಕದವರಾಗಿರುವ ಅವರು ತಾಯಿ, ಪತ್ನಿ, ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಇಂದು ಬೆಳಿಗ್ಗೆ 10-30 ಕ್ಕೆ ಅವರ ಮನೆಯಲ್ಲಿ ನಡೆಯಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top