ವಿದ್ಯಾಗಿರಿಯ ಪ್ರಯಾಣಿಕರ ತಂಗುದಾಣವನ್ನು ಕ್ಲೀನ್ ಮಾಡಿಸಿದ ಅಶೋಕ್ ಆಳ್ವ !

Picture of Namma Bedra

Namma Bedra

Bureau Report

ಜನಪರ, ಜನೋಪಕಾರಿ ಕೆಲಸಗಳನ್ನು ಮಾಡಲು ಅಥವಾ ಮಾಡಿಸಲು ಜನಪ್ರತಿನಿಧಿಗಳಾಗಲೇಬೇಕೆಂದಿಲ್ಲ. ಜನಸೇವಾ ಮನಸ್ಸಿದ್ದರೆ, ನಾಲ್ಕು ಜನರಿಗೆ ಪ್ರಯೋಜನವಾಗಲಿ ಎಂಬ ಮನಸ್ಸಿದ್ದರೆ ಹೀಗೂ‌ ಮಾಡಿಸಬಹುದೆನ್ನುವುದಕ್ಕೆ ಮೂಡುಬಿದಿರೆಯ ಬಸ್ ಏಜೆಂಟ್, ಸಮಾಜ ಸೇವಕ ಅಶೋಕ್ ಆಳ್ವ ಸಾಕ್ಷಿ.
ವಿದ್ಯಾಗಿರಿಯಲ್ಲೊಂದು ಪ್ರಯಾಣಿಕರ ತಂಗುದಾಣವಿದೆ.ಕೆಲ ವರ್ಷಗಳ ಹಿಂದೆ ಇಲ್ಲಿನ ಇನ್ನರ್ ವೀಲ್ ಕ್ಲಬ್ ನವರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ತಂಗುದಾಣವನ್ನು ನಿರ್ಮಿಸಿದ್ದರು.ಅದಕ್ಕೆ ‘ ವಿಶ್ರಾಂತಿ’ ಎಂಬ ನಾಮಕರಣವನ್ನೂ ಮಾಡಿದ್ದರು.‌ಆದರೆ ಇತ್ತೀಚಿನ ಕೆಲವು ದಿನಗಳ ಈ ತಂಹುದಾಣದೊಳಗಿನ ಅವ್ಯವಸ್ಥೆ ನೋಡಿದರೆ ವಿಶ್ರಾಂತಿ ಮಾಡುವುದು ಬಿಡಿ, ಆಸ್ಪತ್ರೆಗೆ ಹೋಗಿಯೇ ವಿಶ್ರಾಂತಿ ಮಾಡಬೇಕಿದ್ದ ಸ್ಥಿತಿ ನಿರ್ಮಾಣವಾಗಿತ್ತು.
ಅದ್ಯಾರೋ ಕೆಲವು ಕಜವುಗಳು ಇದರೊಳಗೆ ಬಂದು ಒಂದಿಷ್ಟು ರಾಶಿ ಕಜವುಗಳನ್ನು ಹಾಕಿ ಹೋಗಿದ್ದರು.ನೀರಿನ ಬಾಟಲ್, ದುರ್ನಾಥ ಬರುವಂತಹ ವಸ್ತುಗಳನ್ನು ಹಾಕಿರುವುದರಿಂದ ದುರ್ನಾಥದಿಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಇದರೊಳಗೆ ಪೊಗ್ಗಲೂ ಅಸಾಧ್ಯವಾಗಿತ್ತು.
ಇಲ್ಲಿನ ಈ ಅವ್ಯವಸ್ಥೆಗಳನ್ನು ಕಂಡು ಇಲ್ಲಿನ ಕೆಲವರು ಅಶೋಕ್ ಆಳ್ವರಿಗೆ ಮಾಹಿತಿ ನೀಡುತ್ತಾರೆ. ಆಳ್ವರು ಕೂಡಲೇ ಅಲ್ಲಿಗೆ ಹೋಗಿ ಪುರಸಭೆಯವರಿಗೆ ಕಾಲ್ ಮಾಡಿ ಹೇಳುತ್ತಾರೆ.


ಪುರಸಭಾಧಿಕಾರಿಗಳೂ ಆಳ್ವರ ಮನವಿಗೆ ಸ್ಪಂದಿಸಿ ಕೂಡಲೇ ಸಿಬ್ಬಂದಿಗಳನ್ನು ಕಳುಹಿಸುತ್ತಾರೆ.


ಪುರಸಭಾ ಸಿಬ್ಬಂದಿಗಳು ಪ್ರಯಾಣಿಕರ ತಂಗುದಾಣವನ್ನು ಶುಚಿಗೊಳಿಸಿ ಮೂಲರೂಪಕ್ಕೆ ತರುತ್ತಾರೆ. ಮತ್ತೆ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಅನುಕೂಲವಾಗುವಂತಾಗಿದೆ.
ಈ ಜನೋಪಯೋಗಿ ಕೆಲಸವನ್ನು ಮಾಡಿಕೊಟ್ಟ ಅಶೋಕ್ ಆಳ್ವ ಮತ್ತು ಪುರಸಭಾ ಸಿಬ್ಬಂದಿಗಳಿಗೆ ಈ ಭಾಗದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top