ಕಜವು ಬಿಸಾಡಿದವರಿಂದಲೇ ಕಸ ಹೆಕ್ಕಿಸಿದ ಗ್ಯಾರಂಟಿ ಪ್ರೆಸಿಡೆಂಟ್!

Picture of Namma Bedra

Namma Bedra

Bureau Report

ನೀರು, ಚರಂಡಿ ರಿಪೇರಿ, ಗ್ಯಾರಂಟಿ ಅನುಷ್ಠಾನ ಮೂಲಕ ಗಮನಸೆಳೆದಿದ್ದ ವಾಲ್ಪಾಡಿ ಪರಿಸರದ ಜನಪ್ರಿಯ ಜನನಾಯಕ, ಗ್ಯಾರಂಟಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.
ಈಬಾರಿ ಅವರು ಸುದ್ಧಿಯಾಗಿರುವುದು ಕಜವು ಹೆಕ್ಕಿಸಿದ ಮೂಲಕ.
ಶಿರ್ತಾಡಿ ಪರಿಸರದ ಒಂದಿಬ್ಬರು ವಾಲ್ಪಾಡಿ ಕೊಯಕುಡೆ ಚಡಾವು ರಸ್ತೆ ಪಕ್ಕದಲ್ಲಿ ಕಜವು ತಂದು ಹಾಕಿದ್ದರು.
ಯಾರೂ ನೋಡುವುದಿಲ್ಲವೆಂದು ಗೋಣಿ ಚೀಲವನ್ನು ಗಿಚ್ಚಿಸಿ ಕಜವುಗಳನ್ನು ಅನ್ಲೋಡ್ ಮಾಡಿಹೋಗಿದ್ದರು.
ಆದರೆ ಅವರ ಕಿತಾಪತಿಯನ್ನು ಸಿಸಿ ಕೆಮರಾ ನೋಡುತ್ತಲೇ ಇತ್ತು.ಅದೆಲ್ಲಾ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು.
ಈ ವಿಚಾರ ಅರುಣ್ ಕುಮಾರ್ ಶೆಟ್ಟಿ ಅವರ ಗಮನಕ್ಕೆ ಬಂದಿದೆ.ಕೂಡಲೇ ಅವರಿಬ್ಬರನ್ನೂ ಕಂಡು ಹಿಡಿದು ಅವರಿಂದಲೇ ಹೆಕ್ಕಿಸಿ ವಾಪಾಸು ಲೋಡ್ ಮಾಡಿಸಿ ಕಳುಹಿಸುವುದರೊಂದಿಗೆ ಒಂದು ಸಾವಿರ ಫೈನನ್ನೂ ಹಾಕಿಸಿದ್ದಾರೆ.
ಅರುಣ್ ಅವರ ಈ ಕೆಲಸಕ್ಕೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು ಕಂಡಕಂಡಲ್ಲಿ ಕಸ ಹಾಕುವವರಿಗೆ ಇದೊಂದು ಒಳ್ಳೆಯ ಪಾಠವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top