ಮೂಡುಬಿದಿರೆ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಿದ ಯು.ಟಿ.ಖಾದರ್

Picture of Namma Bedra

Namma Bedra

Bureau Report

ಮೂಡುಬಿದಿರೆಯ ಗೌರಿಕೆರೆ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಅವರು ಖಾದರ್ ಅವರನ್ನು ಗೌರವಿಸಿದರು.


ಮಾಜಿ ಸಚಿವ ಕೆ.ಅಭಯಚಂದ್ರ, ಪದಾಧಿಕಾರಿಗಳಾದ ರತ್ನಾಕರ ಸಿ.ಮೊಯ್ಲಿ, ಯಶೋಧರ ದೇವಾಡಿಗ,ವಿಶ್ವನಾಥ ಪಿ.ದೇವಾಡಿಗ, ಶಶಿಧರ ದೇವಾಡಿಗ, ಸುರೇಶ್ ಕುಕ್ಕಿನೊಟ್ಟು, ಧರ್ಮವೀರ ಮೊಯ್ಲಿ,ಚಂದ್ರಶೇಖರ ದೇವಾಡಿಗ, ವಸಂತಿ ದೇವಾಡಿಗ, ಸುಶೀಲ ದೇವಾಡಿಗ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top