ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.
ಸತ್ತು ಮೂರ್ನಾಲ್ಕು ದಿವಸಗಳ ಅಂದಾಜಿನಲ್ಲಿ ಕೊಳೆತು ದುರ್ನಾಥ ಬೀರುತ್ತಿದೆ.
ನೆರೆಮನೆಯವರೊಬ್ಬರ ನಾಯಿಯೊಂದು ಕಾಣೆಯಾಗಿದ್ದು ಅದೇ ನಾಯಿ ಸತ್ತು ದುರ್ನಾಥ ಬೀರುತ್ತಿರಬಹುದೆಂದು ಹುಡುಕಾಡುತ್ತಾ ಹೋದಾಗ ಈ ಶವ ಪತ್ತೆಯಾಗಿದೆ.

ಕೇರಳ ಮೂಲದ ಚೇಟ ಎಂಬಾತ ಇದೇ ಪರಿಸರದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಸಂಜೆ ಕುಡಿದು ಅಲ್ಲಲ್ಲಿ ಮಲಗುತ್ತಿದ್ದ. ಆತನದ್ದೇ ಶವವೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮೂಡುಬಿದಿರೆ ಎಸ್.ಐ.ಪ್ರತಿಭಾ ಅವರು ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.





