ಪಿಯುಸಿ ಸಾಧಕಿ ಸೋನಾಲ್ ಅವರಿಗೆ ರೋಟರಿ ಟೆಂಪಲ್ ಟೌನ್ ವತಿಯಿಂದ ಸನ್ಮಾನ

Picture of Namma Bedra

Namma Bedra

Bureau Report

ಈಬಾರಿಯ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ. 95.80 ಫಲಿತಾಂಶದೊಂದಿಗೆ ತೇರ್ಗಡೆಗೊಂಡು ಸಾಧನೆ ಮಾಡಿರುವ ಗುರುವಾಯನಕೆರೆ ಎಕ್ಸೆಲ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ, ಮೂಡುಬಿದಿರೆ ರೋಟರಿ ಟೆಂಪಲ್ ಟೌನ್ ನ ಸದಸ್ಯ, ವಿವಿಧ ಸಂಘಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿರುವ ಶಂಕರ್ ಎ.ಕೋಟ್ಯಾನ್- ಜೀವಿತಾ ಶಂಕರ್ ಪುತ್ರಿ ಸೋನಾಲ್ ಎಸ್.ಅವರನ್ನು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಸನ್ಮಾನಿಸಲಾಯಿತು.
‌ ಕ್ಲಬ್ ಅಧ್ಯಕ್ಷ ಹರೀಶ್ ಎಂ.ಕೆ, ರೋಟರಿ ಅಸಿಸ್ಟೆಂಟ್ ಗವರ್ನರ್ ಉಮೇಶ್ ರಾವ್,ಸ್ಥಾಪಕ ಅಧ್ಯಕ್ಷ, ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ರಾಮಚಂದ್ರ ಮಿಜಾರ್, ಕಾರ್ಯದರ್ಶಿ ಭರತ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ಡೇನಿಸ್ ಪಿರೇರಾ, ಶಂಕರ್ ಎ.ಕೋಟ್ಯಾನ್, ಜೀವಿತಾ ಶಂಕರ್ ಮತ್ತಿತರರು ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top