ಡಿ.ಕೆ.ಶಿಷ್ಯ ಎಮ್ಮೆಲ್ಸಿ ?

Picture of Namma Bedra

Namma Bedra

Bureau Report

ಬುಧವಾರ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಡಿ.ಕೆ.ಅವರ ಬಲಗೈ, ಶಿಷ್ಯ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ ಮಿಥುನ್ ರೈ ಅವರು ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆ, ಬಳಿಕ ಅವರನ್ನು ಮಂತ್ರಿಯನ್ನಾಗಿ ಮಾಡಲಾಗುವುದೆಂಬ ಮಾತುಗಳು ಭರ್ಜರಿ ಪ್ರಚಾರದಲ್ಲಿದೆ.
ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಮಿಥುನ್ ರೈ ಅವರು ಡಿ.ಕೆ.ಶಿ ಅವರೊಂದಿಗೆ ರಾಜಕೀಯದಲ್ಲಿ ಬೆಳೆದವರು.ಡಿ.ಕೆ.ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು.
ಮಿಥುನ್ ರೈ ಅವರು ಹಲವು ವರ್ಷಗಳಿಂದ ಪಕ್ಷ ಸಂಘಟಿಸುತ್ತಾ ಕೋಟಿಗಟ್ಟಲೆ ಖರ್ಚು ಮಾಡಿ ಪಕ್ಷವನ್ನು ಗಟ್ಟಿಪಡಿಸಲು ಶ್ರಮಿಸಿದವರು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರಾದರೂ ಮತದಾರರು ಅವರ ‘ ಕೈ’ ಹಿಡಿಯಲಿಲ್ಲ. ಆದರೂ ತಮಗೆ ಸಿಕ್ಕ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದವರು. ಇತ್ತೀಚಿನ ದಿನಗಳಲ್ಲಿ ಕಾರ್ಯಕರ್ತರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವ ಆರೋಪ ಅವರ ಮೇಲಿತ್ತು.ಆದರೆ ತನ್ನ ಕ್ಷೇತ್ರವನ್ನು ಮರೆಯದ ಅವರು ಕೆಲವು ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಮೂಡುಬಿದಿರೆಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಮತ್ತೆ ಬಲಪಡಿಸುತ್ತೇನೆ ಎಂಬ ಅವರ ಹೇಳಿಕೆ ಕಾರ್ಯಕರ್ತರಲ್ಲಿ ಮತ್ತೆ ವಿಶ್ವಾಸವನ್ನು ಹೆಚ್ಚಿಸಿತ್ತು.
ಡಿ.ಕೆ.ಶಿ ಅವರು ಕೆಲ ತಿಂಗಳ ಹಿಂದೆ ‘ ಡಿ.ಕೆ.ಶಿವಕುಮಾರ್ ಅವರು ಖಂಡಿತ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಗಟ್ಟಿಯಾಗಿ ಹೇಳಿದ್ದು ಇದೇ ಮಿಥುನ್ ರೈ.
ಅವರ ಆ ಹೇಳಿಕೆಯ ವೀಡಿಯೋಗೆ ಈಗ ಮೈಲೇಜ್ ಸಿಗುತ್ತಿದೆ.
ಅದೇನೇ ಇರಲಿ, ಜಿಲ್ಲೆಯ ಯುವನಾಯಕನ ಪರಮ ಆಪ್ತ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದು ಮಿಥುನ್ ಬಳಗ ಮತ್ತು ಕೈ ಕಾರ್ಯಕರ್ತರಲ್ಲಿ ಸಂತಸ ಹೆಚ್ಚಿಸಿದೆ.ಅವರ ಅಪಾರ ಬೆಂಬಲಿಗರ ಆಗ್ರಹ ಕೂಡಾ ರೈ ಅವರನ್ನು ಎಮ್ಮೆಲ್ಸಿ ಮಾಡಿ ಆ ಬಳಿಕ ಮಂತ್ರಿ ಮಾಡಬೇಕೆನ್ನುವುದೇ ಆಗಿದೆ.
ಆ ಬೇಡಿಕೆಗಳಿಗೀಗ ಸಕಾಲವಾಗಿದ್ದು ಶೀಘ್ರದಲ್ಲೇ ಮಿಥುನ್ ರೈ ಅವರು ವಿಧಾನಪರಿಷತ್ ಸದಸ್ಯರಾಗಿ ಬಳಿಕ ಮಂತ್ರಿಯಾಗಲಿದ್ದಾರೆ ಎನ್ನುವ ಮಾತುಗಳೇ ಸದ್ಯ ಹೆಚ್ಚು ಪ್ರಚಾರದಲ್ಲಿರುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top