ಮೂಡುಬಿದಿರೆ ಠಾಣೆಯಲ್ಲಿ ಕಳೆದ ಕೆಲ ವರ್ಷಗಳಿಂದ ಸೇವೆ ಸಲ್ಲಿಸಿ ಅಪರಾಧ ಪತ್ತೆ ವಿಭಾಗದಲ್ಲಿ ಗಮನಸೆಳೆದಿದ್ದ ಅಖಿಲ್ ಅಹಮದ್, ಮುಹಮ್ಮದ್ ಹುಸೈನ್ ಸಹಿತ 8 ಮಂದಿ ಪೊಲೀಸರ ವರ್ಗಾವಣೆಯಾಗಿದೆ.
ಅಖಿಲ್ ಅವರು ಪಾಂಡೇಶ್ವರ ಠಾಣೆಗೆ, ಹುಸೈನ್ ಅವರು ಕದ್ರಿ ಠಾಣೆಗೆ,ಪ್ರದೀಪ್ ಕುಮಾರ್ ಸುರತ್ಕಲ್ ಠಾಣೆಗೆ, ಪ್ರದೀಪ್ ಕುಲಾಲ್ ಮೂಲ್ಕಿ ಠಾಣೆಗೆ ,ಅರುಣ್ ಅವರು ಉಳ್ಳಾಲ ಠಾಣೆಗೆ, ಅಯ್ಯಪ್ಪ, ಸುರೇಶ್ ಹಾಗೂ ಧರ್ಮಣ ಅವರು ಬಜ್ಪೆ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.






