ಡೀಕೇಶಿ ಕಿಂಗ್- ಬಿಜೆಪಿ ಶೇಕಿಂಗ್!–ರುಕ್ಕಯ್ಯ ಪೂಜಾರಿ

Picture of Namma Bedra

Namma Bedra

Bureau Report

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದರಿಂದ ವಿರೋಧ ಪಕ್ಷವಾದ ಬಿಜೆಪಿಗೆ ನಡುಕ ತಂದಿದೆ,ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಹೊರಿಸುವುದಿನ್ನು ಬಿಜೆಪಿಗೆ ಕಷ್ಟದ ಕೆಲಸ ಎಂದು ತಾ.ಪಂ.ಮಾಜಿ ಸದಸ್ಯ,ನೆಲ್ಲಿಕಾರು ವ್ಯ.ಸೇ.ಸ.ಸಂಘದ ನಿರ್ದೇಶಕರಾದ ರುಕ್ಕಯ್ಯ ಪೂಜಾರಿ ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಧ್ವೇಷದಲ್ಲಿ ಟೀಕಿಸಿ ಜನರೊಂದಿಗೆ ಎತ್ತಿಕಟ್ಟುತ್ತಿದ್ದ ಬಿಜೆಪಿಗೆ ಡಿ.ಕೆ.ಶಿವಕುಮಾರ್ ಬಗ್ಗೆ ಆ ರೀತಿಯ ಟೀಕೆ ಮಾಡಲು ಅವಕಾಶವಿಲ್ಲ‌ ಎಂದು ಹೇಳಿರುವ ಅವರು,ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಎಲ್ಲ ಮಠ ಮಂದಿರಗಳ ಸ್ವಾಮೀಜಿಗಳು,ಗುರುಗಳು ಡಿ.ಕೆ.ಶಿ.ಪ್ರಮಾಣವಚನ ಸಂದರ್ಭದಲ್ಲಿ ಹಾಜರಿದ್ದದ್ದನ್ನು ಇಡೀ ದೇಶವೇ ಗಮನಿಸಿದೆ,ಅದು ಕೂಡಾ ಬಿಜೆಪಿಗೆ ದೊಡ್ಡ ನಡುಕವನ್ನೇ ಕೊಟ್ಟಂತಾಗಿದೆ ಎಂದಿದ್ದಾರೆ.
ಡೇರಿಂಗ್ ನಾಯಕ ಬಿ.ಕೆ‌.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದೂ ಬಿಜೆಪಿಗರ ಬಾಯಿಗೆ ಬಟ್ಟೆ ತುರುಕಿಸಿದಂತಾಗಿದೆ,ಇನ್ನು ಮುಂದೆ ಕಾಂಗ್ರೆಸ್ ಮೇಲೆ ಆರೋಪ ಹೊರಿಸುವುದು ಬಿಜೆಪಿಗೆ ಸುಲಭದ ವಿಷಯವಲ್ಲ ಎನ್ನುವುದನ್ನು ಪಕ್ಷದ ಮುಖಂಡರು ಮನವರಿಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top