ಶಿರ್ತಾಡಿ ಮೆಂಡೋನ್ಸ ಕಾಂಪ್ಲೆಕ್ಸ್ ಮಾಲಕ, ಕೃಷಿಕ ಥೋಮಸ್ ಮೆಂಡೋನ್ಸ ( 85) ಅವರು ಶುಕ್ರವಾರ ಸಂಜೆ ನಿಧನರಾದರು.
ಹಿರಿಯ ಕಾಂಗ್ರೆಸಿಗರಾಗಿದ್ದ ಅವರು ಪತ್ನಿ, ಶಿರ್ತಾಡಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಮೆಂಡೋನ್ಸ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ನಾಳೆ ( ಶನಿವಾರ) ಸಂಜೆ 3-30 ಕ್ಕೆ ಶಿರ್ತಾಡಿ ಚರ್ಚ್ ನಲ್ಲಿ ನಡೆಯಲಿದೆ ಎಂದು ಪ್ರವೀಣ್ ಮೆಂಡೋನ್ಸ ಅವರು ತಿಳಿಸಿದ್ದಾರೆ.






