ಬೋರುಗುಡ್ಡೆ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ಬಟ್ಟಲು ವಿತರಣೆ *ಭಡ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ

Picture of Namma Bedra

Namma Bedra

Bureau Report

ಬೋರುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಕಲಿಕೆಗೆ ಪ್ರೋತ್ಸಾಹದಾಯಕ ವಸ್ತುಗಳ ವಿತರಣೆ, ದ್ವಿಭಾಷಾ ಮಾಧ್ಯಮ ತರಗತಿಗಳ ಉದ್ಘಾಟನೆ ಹಾಗೂ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವು ಶನಿವಾರ ನಡೆಯಿತು.


ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿರುವ ಶ್ರೀಮತಿ ಅನಸೂಯ ಹಾಗೂ ಸುರೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
‌ ನೆಲ್ಲಿಕಾರು ಪಂಚಾಯತ್ ಮಾಜಿ ಅಧ್ಯಕ್ಷರಾದ ಉದಯ ಪೂಜಾರಿ, ಜಯಂತ್ ಹೆಗ್ಡೆ, ಪರಶುರಾಮ ಸೇವಾ ಘಟಕದ ಸಂಚಾಲಕ ದಿನೇಶ್ ಪೂಜಾರಿ, ಪಿಜಿನ ಪೂಜಾರಿ, ಸುಂದರ ಹೆಗ್ಡೆ, ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಒಂದನೇ ತರಗತಿಯ ಮಕ್ಕಳಿಗೆ ಬಟ್ಟಲು,ಲೋಟ, ಏಳನೇ ತರಗತಿವರೆಗಿನ ಮಕ್ಕಳಿಗೆ ಬ್ಯಾಗು ಹಾಗೂ ಇತರ ವಸ್ತುಗಳನ್ನು ವಿತರಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top