ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಮೀಟ್ – 2026 ಕ್ರೀಡಾಕೂಟದಲ್ಲಿ ಮೂಡುಬಿದಿರೆಯ ಟ್ರ್ಯಾಕ್ & ಫೀಲ್ಡ್ ವತಿಯಿಂದ ಭಾಗವಹಿಸಿದ್ದ ಅಮ್ರೀನ್ ( ಆದಾಯ ತೆರಿಗೆ ಉದ್ಯೋಗಿ) ಹಾಗೂ ಖುಷಿ ( ಇಂಜಿನಿಯರಿಂಗ್ ವಿದ್ಯಾರ್ಥಿನಿ) ಅವರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಇವರಿಬ್ಬರೂ ಮೂಡುಬಿದಿರೆಯ ಕೋಚ್ ಹಾರಿಸ್ ಅವರಿಂದ ಮೂಡುಬಿದಿರೆ ಜೈನ್ ಜೂನಿಯರ್ ಕಾಲೇಜ್ ಕ್ಯಾಂಪಸ್ ನಲ್ಲಿ ತರಬೇತಿ ಪಡೆದಿದ್ದರು.






