ಮೂಡುಬಿದಿರೆಯ ‘ ತುಳುವೆರ್ ಬೆದ್ರ’ ಸಂಘಟನೆಯ ವತಿಯಿಂದ ದೇವದಾಸ್ ಕಾಪಿಕಾಡ್ ಅವರ ‘ ಏರ್ಲಾ ಗ್ಯಾರಂಟಿ ಅತ್ತ್’ ನಾಟಕ ಪ್ರದರ್ಶನ ಮತ್ತು ಏಳು ಮಂದಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಸಂಜೆ ಕನ್ನಡ ಭವನದಲ್ಲಿ ನಡೆಯಿತು.
ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ,ಚಾ ಪರ್ಕ ತಂಡದ ಮುಖ್ಯಸ್ಥ ದೇವದಾಸ್ ಕಾಪಿಕಾಡ್, ಹಿರಿಯ ಮೇಸ್ತ್ರಿ ಜಯ ಗೌಡ ಹಾಗೂ ಕಲಾವಿದ ಸತೀಶ್ ಭಂಡಾರಿ ಕರಿಂಜೆ ಅವರನ್ನು ಸನ್ಮಾನಿಸಲಾಯಿತು.
ಅಸೌಖ್ಯದಲ್ಲಿರುವ ಬೆಳುವಾಯಿಯ ರೋಗಿಯೋರ್ವರಿಗೆ ಏರ್ ಬೆಡ್ ನೀಡಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ, ಬಿಜೆಪಿ ಮುಖಂಡರಾದ ಸುದರ್ಶನ ಎಂ, ಜಗದೀಶ್ ಅಧಿಕಾರಿ,ಪುರಸಭಾ ಸದಸ್ಯ ಪುರಂದರ ದೇವಾಡಿಗ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್,ಸತ್ಯಪ್ರಕಾಶ್ ಹೆಗ್ಡೆ, ಸುಕುಮಾರ್ ಅಮೀನ್ ಕಲ್ಲಮುಂಡ್ಕೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘಟಕರಾದ ಅಶ್ರಫ್ ವಾಲ್ಪಾಡಿ, ಹಫೀಝ್ ತೋಡಾರ್, ಸಂತೋಷ್ ಶೆಟ್ಟಿ ಮಿಜಾರ್ ಉಪಸ್ಥಿತರಿದ್ದರು.
ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
