ವಾಲ್ಪಾಡಿ ಮಾಡದಂಗಡಿ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ, ಕೊಡೆ, ಸಮವಸ್ತ್ರ ವಿತರಣೆ

Picture of Namma Bedra

Namma Bedra

Bureau Report

ದಾನಿಗಳಾದ ಅಬೂಬಕ್ಕರ್ ಶಿರ್ತಾಡಿ ಹಾಗೂ ಶಶಿಧರ ದೇವಾಡಿಗ ಶಿರ್ತಾಡಿ ಅವರು ವರ್ಷಂಪ್ರತಿ ನೀಡುವ ಉಚಿತ ನೋಟ್ ಪುಸ್ತಕ ಮತ್ತು ಕೊಡೆಯನ್ನು ವಾಲ್ಪಾಡಿ ಮಾಡದಂಗಡಿ ಶಾಲಾ ವಿದ್ಯಾರ್ಥಿಗಳಿಗೆ ಬುಧವಾರ ಬೆಳಿಗ್ಗೆ ವಿತರಿಸಲಾಯಿತು.
ವಾಲ್ಪಾಡಿ ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ ಸುವರ್ಣ, ದಾನಿ ಅಬೂಬಕ್ಕರ್ ಶಿರ್ತಾಡಿ, ಎಸ್.ಡಿ.ಎಂ.ಸಿ.ನೂತನ ಅಧ್ಯಕ್ಷ ಯೂಸುಫ್, ಮಾಜಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಉಪಾಧ್ಯಕ್ಷೆ ಶೋಭಾ ಶೆಟ್ಟಿ ಅವರು ಕೊಡೆ, ಪುಸ್ತಕ, ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.


ಸಹಶಿಕ್ಷಕಿ ಶೈಲಜಾ, ಎಸ್‌.ಡಿ.ಎಂ.ಸಿ.ಸದಸ್ಯರಾದ ರೇಣುಕಾ, ಶಾರದಾ, ಅಮೀನ,ಸಾರಮ್ಮ,ರೇಶ್ಮಾ, ಅಮಿತಾ,ವೇದವತಿ,ಚಂದ್ರಾವತಿ,ಅಡುಗೆ ಸಿಬ್ಬಂದಿ ಸುರೇಖಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರಶ್ಮಿ ಎಂ.ಎಸ್.ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top