ಮಾಂಟ್ರಾಡಿಯ ಕಾಲು ಸೇತುವೆಗೆ ದಾರಿಯಾಯ್ತು, ಪಿದಮಲೆ ರಸ್ತೆಗೆ ಜಲ್ಲಿ ಬಿತ್ತು.. ‘ನಮ್ಮ ಬೆದ್ರ’ ವರದಿ ಫಲಶೃತಿ

Picture of Namma Bedra

Namma Bedra

Bureau Report

ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಗುತ್ತಾಪು ಎಂಬಲ್ಲಿನ ಕಾಲುಸೇತುವೆ ಮತ್ತು ಪಿದಮಲೆ ರಸ್ತೆಯ ರಿಪೇರಿ ಕೆಲಸ ತಕ್ಕಮಟ್ಟಿಗೆ ನಡೆದಿದೆ.ಅಂದರೆ ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕ ನೆಲೆಯಲ್ಲಿ ರಿಪೇರಿ ಕೆಲಸ ನಡೆದಿದ್ದು ಮರಿಯಲ ಮುಗಿದ ಕೂಡಲೇ ಈ ಎರಡಕ್ಕೂ ಹೊಸ ರೂಪ ಸಿಗಲಿದೆ.


ಪಿದಮಲೆ – ಮಾಂಟ್ರಾಡಿ ರಸ್ತೆ ಮಳೆಯಿಂದಾಗಿ ಕೆಸರುಮಯವಾಗಿ ಜನ,ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಕಳೆದ ವರ್ಷ ಇದೇ ಪರಿಸರದವರು ಮಣ್ಣು, ಕಲ್ಲು ಹಾಕಿ ಸಮತಟ್ಟುಗೊಳಿಸಿದ್ದರು. ಆದರೆ ಈ ವರ್ಷ ಮತ್ತೆ ಅದೇ ಸ್ಥಿತಿ ಉಂಟಾಗಿ ಜನಸಂಚಾರಕ್ಕೆ ತೊಂದರೆಯಾಗುತ್ತಿತ್ತು.ಜನಪ್ರತಿನಿಧಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವೆಂದು ಹೇಳಿ ಜನರಿಗಾಗುವ ಸಮಸ್ಯೆಯ ಕುರಿತು ‘ ನಮ್ಮಬೆದ್ರ’ ವರದಿ ಮಾಡಿತ್ತು.
ವರದಿಯನ್ನು ಗಮನಿಸಿದ್ದ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಶಿಧರ್ ಎಂ.ಅವರು ಈ ರಸ್ತೆ ಕಾಮಗಾರಿಯ ಗುತ್ತಿಗೆದಾರ ಲೋಕೇಶ್ ಅವರನ್ನು ಸಂಪರ್ಕಿಸಿ ಇಲ್ಲಿನ ಜನರಿಗಾಗುವ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.
ಜನರಿಗೆ ಸಮಸ್ಯೆಯಾಗಬಾರದೆನ್ನುವ ನಿಟ್ಟಿನಲ್ಲಿ ಗುತ್ತಿಗೆದಾರ ಲೋಕೇಶ್ ಅವರು ಗುರುವಾರ ಜೆಸಿಬಿ ಮತ್ತು ಸಾಮಾಗ್ರಿಗಳನ್ನು ಕಳುಹಿಸಿ ರಸ್ತೆಗೆ ಜಲ್ಲಿ,ಮಣ್ಣು ಹಾಕಿಸಿ ತಾತ್ಕಾಲಿಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.‌ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಅವರಿಬ್ಬರಿಗೂ ಈಭಾಗದ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನೊಂದು ಸಮಸ್ಯೆ ಇದ್ದದ್ದು ಮಾಂಟ್ರಾಡಿಯ ಗುತ್ತಾಪು ಎಂಬಲ್ಲಿನ ಕಾಲು ಸಂಕದ್ದು. ಹಳೆಯ ಕಾಲು ಸಂಕ ಮುರಿದು ಬಿದ್ದಿರುವುದರಿಂದ ಹೊಸ ಕಾಲು ಸಂಕ ನಿರ್ಮಾಣ ಮಾಡಲಾಗಿತ್ತು. ಆದರೆ ಅಲ್ಲಿ ದಾರಿಯೇ ಇಲ್ಲದ್ದು ಸಮಸ್ಯೆಯಾಗಿತ್ತು. ಹಿಂದಿನ ಕಾಲು ಸಂಕ ಸ್ವಲ್ಪ ಎತ್ತರದಲ್ಲಿತ್ತು.ಹೊಸತನ್ನು ನಿರ್ಮಾಣ ಮಾಡುವಾಗ ಗುತ್ತಿಗೆದಾರ ಸ್ವಲ್ಪ ಎತ್ತರಕ್ಕೆ ಕಟ್ಟುವುದನ್ನು ಮರೆತುಬಿಟ್ಟಿದ್ದ.ಹಾಗಾಗಿ ಅದು ಪಕ್ಕದ ಗದ್ದೆಗೆ ತಾಗಿಕೊಂಡಂತೆಯೇ ಇತ್ತು ಮತ್ತು ದಾರಿ ಇರಲಿಲ್ಲ. ಈಬಗ್ಗೆ ಕೂಡಾ ‘ನಮ್ಮಬೆದ್ರ’ ವರದಿ ಪ್ರಕಟಿಸಿತ್ತು. ಈಬಗ್ಗೆ ಕೂಡಾ ಶಶಿಧರ್ ಅವರು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಿದ್ದು ಗುರುವಾರದ ದಿನ ಆ ಕಾಲು ಸೇತುವೆಗೊಂದು ದಾರಿ ಮಾಡಿಕೊಟ್ಟು ಸಾರ್ವಜನಿಕರಿಗೆ ಉಪಕಾರ ಆಗುವಂತಹ ಕೆಲಸವನ್ನು ಪಂಚಾಯತ್ ಮಾಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top