ಹಂಡೇಲಿನಲ್ಲಿ ನಾಳೆ ಉಚಿತ ವೈದ್ಯಕೀಯ ಶಿಬಿರ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

Picture of Namma Bedra

Namma Bedra

Bureau Report

ಹೆಲ್ಪಿಂಗ್ ಗೈಸ್ ಹಂಡೇಲು ಇದರ ಹದಿನೈದನೇ ವರ್ಷಾಚರಣೆಯ ಪ್ರಯುಕ್ತ ಮಂಗಳೂರು ದೇರಳಕಟ್ಟೆಯ ಯೆನಪೋಯ ವೈದ್ಯಕೀಯ ಮಹಾವಿದ್ಯಾಲಯದ ಸರಕಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ನಾಳೆ ಬೆಳಿಗ್ಗೆ 9-30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಂಡೇಲು ಮುಹಿಯುದ್ದೀನ್ ಜುಮ್ಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಅನುಭವಿ ವೈದ್ಯರು ಹಾಗೂ ಸಿಬ್ಬಂದಿಗಳು ಈ ಶಿಬಿರದಲ್ಲಿ ಲಭ್ಯರಿದ್ದು ಸಾಮಾನ್ಯ ವೈದ್ಯಕೀಯ ಪರೀಕ್ಷೆ,ಸ್ತ್ರೀ ರೋಗ ಪರೀಕ್ಷೆ,ಮಕ್ಕಳ ತಪಾಸಣೆ,ಕಿವಿ ಹಾಗೂ ಮೂಗಿನ ಪರೀಕ್ಷೆ, ಚರ್ಮರೋಗ ಪರೀಕ್ಷೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ,ದಂತ ಪರೀಕ್ಷೆ ಹಾಗೂ ಕಣ್ಣಿನ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣೆ ನಡೆಯಲಿದೆ ಎಂದು ಹೆಲ್ಪಿಂಗ್ ಗೈಸ್ ಮುಖ್ಯಸ್ಥರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಹನೀಫ್ ಹಂಡೇಲ್ ( ವಿದೇಶದಲ್ಲಿ ಉದ್ಯೋಗಿ) ಅವರು ಶುಭಹಾರೈಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top