ಡ್ಯಾಷಿಂಗ್ ಹೀರೊ ಮಿಥುನ್ ರೈ ಅವರಿಗೆ ರಾಜಕೀಯ ಪವರ್ ಸಿಗಲಿ: ರಾಜೇಶ್ ಕಡಲಕೆರೆ

Picture of Namma Bedra

Namma Bedra

Bureau Report

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟಾ ಶಿಷ್ಯ,ಕೆಪಿಸಿಸಿ ಕಾರ್ಯದರ್ಶಿ, ಡ್ಯಾಷಿಂಗ್ ಯುವ ನಾಯಕರಾದ ಮಿಥುನ್ ರೈ ಅವರಿಗೆ ಡಿ.ಕೆ.ಶಿ ಅವರ ಸರಕಾರದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಹೆಚ್ಚಿನ ರಾಜಕೀಯ ಪವರ್ ಸಿಗಬೇಬೆಂದು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ,ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿರುವ ರಾಜೇಶ್ ಕಡಲಕೆರೆ ಅವರು ಆಗ್ರಹಿಸಿದ್ದಾರೆ.
ಡಿ.ಕೆ.ಶಿ ಅವರ ಕಟ್ಟಾ ಶಿಷ್ಯ ಎಂದೇ ಬಿಂಬಿತರಾಗಿರುವ ಕರಾವಳಿಯ ಯೂಥ್ ಐಕಾನ್, ಬಂಟ ಸಮುದಾಯದ ಯುವ ನಾಯಕ ಮಿಥುನ್ ರೈ ಅವರು ಲೋಕಸಭೆ ಹಾಗೂ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರೂ ಪಕ್ಷ ಸಂಘಟನೆ ಮತ್ತು ನೇರ ಮಾತುಗಳಿಂದ ಕರಾವಳಿಯ ಜನರ ಮನಸ್ಸು ಗೆದ್ದಿದ್ದಾರೆ, ತನ್ನ ಡ್ಯಾಷಿಂಗ್ ವ್ಯಕ್ತಿತ್ವದ ಮೂಲಕ ವಿರೋಧ ಪಕ್ಷದವರ ಸಹಿತ ಸಮಾಜದ ಎಲ್ಲಾ ವರ್ಗದವರ ಗಮನಸೆಳೆದಿದ್ದಾರೆ, ಸೋತರೂ ತನ್ನಿಂದಾಗುವ ಎಲ್ಲಾ ಕೆಲಸಗಳನ್ನು ಪಕ್ಷಬೇಧ ಮಾಡದೆ ಮಾಡಿಕೊಡುತ್ತಿದ್ದಾರೆ,ಇಂತಹ ಯುವ ಮತ್ತು ಉತ್ಸಾಹಿ ನಾಯಕನಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ಸಿಕ್ಕರೆ ಪಕ್ಷ ಸಂಘಟನೆಯೊಂದಿಗೆ ಯುವ ಸಮುದಾಯವನ್ನು ಕಾಂಗ್ರೆಸ್ ನತ್ತ ಸೆಳೆಯಲು ಸುಲಭವಾಗುತ್ತದೆ ಎಂದು ಹೇಳಿರುವ ಅವರು ಯುವ ನಾಯಕನಿಗೆ ಹೆಚ್ಚಿನ ಜವಾಬ್ದಾರಿ ಸಿಕ್ಕಲ್ಲಿ ಕರಾವಳಿಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top