ಅಲಂಗಾರು ಲಯನ್ಸ್ ಕ್ಲಬ್ ಗೆ ನೂತನ ಸಾರಥಿಗಳು

Picture of Namma Bedra

Namma Bedra

Bureau Report

ಲಯನ್ಸ್ ಕ್ಲಬ್ ಅಲಂಗಾರು ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋಕಿ ಮಸ್ಕರೇನಸ್, ಕಾರ್ಯದರ್ಶಿಯಾಗಿ ಜೆಸಿಂತಾ ಡಿಮೆಲ್ಲೊ ಹಾಗೂ ಖಜಾಂಚಿಯಾಗಿ ಆಲ್ವಿನ್ ಡಿಕುನ್ಹಾ ಅವರು ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾಗಿ ಅಮಿತ್ ಡಿಸಿಲ್ವಾ,ಚುನಾಯಿತ ಪದಾಧಿಕಾರಿಗಳಾಗಿ ಸುನಿಲ್ ಮೆಂಡೋನ್ಸ, ಜೋನ್ ದಾಂತಿಸ್, ರೋಹನ್ ಆಲ್ವಾರೀಸ್, ಡಯಾನಾ ಸೆರಾವೊ,ವಲೇರಿಯನ್ ಪಿಂಟೊ , ಮೆಲಿಟಾ ಬರ್ಬೋಜಾ ಹಾಗೂ ರಿಚರ್ಡ್ ಡಿಸೋಜ ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರ ಮಂಡಳಿಯ ಸದಸ್ಯರಾಗಿ ರೆ.ಫಾ.ಬಾಸಿಲ್ ವಾಸ್, ಜೆರಾಲ್ಡ್ ಲೋಬೋ, ಮನೋಹರ್ ಕುಟಿನ್ಹಾ, ಹರ್ಮನ್ ಡಿಸಿಲ್ವಾ, ಲಾಯ್ಡ್ ರೇಗೋ ,ಹೆರಾಲ್ಡ್ ತಾವ್ರೊ, ರಾಜಾ ಡಿಸೋಜ, ಚಾರ್ಲ್ಸ್ ಫೆರ್ನಾಂಡಿಸ್, ವಿದ್ಯಾ ಮಸ್ಕರೇನಸ್, ಮೈಕಲ್ ಸಿಕ್ವೇರ ಹಾಗೂ ರಿಚರ್ಡ್ ಬರ್ಬೋಜಾ ಅವರು ಆಯ್ಕೆಯಾಗಿದ್ದಾರೆ.
ಜೂ.20 ರಂದು ಶನಿವಾರ ಸಂಜೆ 7 ಗಂಟೆಗೆ ಕಡಲಕೆರೆಯ ಸೃಷ್ಟಿ ಗಾರ್ಡನ್ ಹಾಲ್ ನಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು ಲಯನ್ಸ್ ದ್ವಿತೀಯ ಜಿಲ್ಲಾ ಉಪರಾಜ್ಯಪಾಲರಾದ ಲ.ವೆಂಕಟೇಶ ಹೆಬ್ಬಾರ್ ಅವರು ಪದಗ್ರಹಣ ನಡೆಸಿಕೊಡಲಿದ್ದಾರೆಂದು ನಿಕಟಪೂರ್ವ ಅಧ್ಯಕ್ಷರಾದ ಅಮಿತ್ ಡಿಸಿಲ್ವಾ ಅವರು ತಿಳಿಸಿದ್ದಾರೆ.
‌‌

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top