ವಾಲ್ಪಾಡಿ ಮಸೀದಿಯಲ್ಲಿ ಎಸ್.ಐ.ಆರ್. ಬಗ್ಗೆ ಮಾಹಿತಿ ಕಾರ್ಯಾಗಾರ

Picture of Namma Bedra

Namma Bedra

Bureau Report

ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಎಸ್.ಐ.ಆರ್.ಬಗ್ಗೆ ಮಾಹಿತಿ ಕಾರ್ಯಾಗಾರವು ಇಲ್ಲಿನ ನೂರುಲ್ ಹುದಾ ಮದರಸದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.
ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ, ನ್ಯಾಯವಾದಿ ಇರ್ಷಾದ್ ಎನ್.ಜಿ.ಅವರು ಎಸ್.ಐ.ಆರ್. ಕುರಿತಾದ ಮಾಹಿತಿಯನ್ನು ನೀಡಿದರು.
ಎಸ್.ಐ.ಆರ್.ಎಂದರೇನು,ನಾವು ನೀಡಬೇಕಾದ ಮಾಹಿತಿ,ಯಾರದ್ದೆಲ್ಲಾ ಚುನಾವಣಾ ಗುರುತು ಚೀಟಿ ನೀಡಬೇಕು,ಮ್ಯಾಪಿಂಗ್ ಎಂದರೇನು ? ಯಾರದ್ದೆಲ್ಲಾ ಎಸ್.ಐ.ಆರ್. ಪಾಸಾಗಬಹುದು? ತಿರಸ್ಕೃತಗೊಂಡರೆ ಮುಂದಿನ ದಿನಗಳಲ್ಲಿ ನೀಡಬೇಕಾದ ದಾಖಲೆಗಳೇನು ? ಎನ್ನುವುದರ ಕುರಿತು ಮಾಹಿತಿ ನೀಡಿದರು.
ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ.ಅಧ್ಯಕ್ಷತೆ ವಹಿಸಿದ್ದರು.
ಸಮಾಜಸೇವಕ ಇಬ್ರಾಹಿಂ ಹಂಡೇಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಅಝ್ಝಿನ್ ಹನೀಫ್ ಮುಸ್ಲಿಯಾರ್ ದುವಾ ನೆರವೇರಿಸಿದರು.
ಅಶ್ರಫ್ ವಾಲ್ಪಾಡಿ ಸ್ವಾಗತಿಸಿ ರಮೀಝ್ ವಾಲ್ಪಾಡಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top