ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ಶ್ಲಾಘನೀಯ ಸೇವೆಗಾಗಿ ನೀಡಲಾಗುವ 2025-26 ನೇ ಸಾಲಿನ ಪ್ರತಿಷ್ಠಿತ ‘ಡಿಜಿಪಿ ಕಮಾಂಡೇಷನ್ ಡಿಸ್ಕ್’ ಪ್ರಶಸ್ತಿ ಗೆ ದ.ಕ.ಜಿಲ್ಲೆ ಪೊಲೀಸ್ ಇಲಾಖೆಯ ಎ.ಆರ್.ಎಸ್.ಐ. ಶೋನ್ ಶಾ ಕೆ.ಜಿ.ಅವರು ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ವರ್ಷದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಶೋನ್ ಶಾ ಅವರು ಈ ಹಿಂದೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು ಬಳಿಕ ಉಲ್ಲಾಳ ಹಾಗೂ ಜಿಲ್ಲೆಯ ವಿವಿಧೆಡೆ ಪ್ರಾಮಾಣಿಕತೆ, ನಿಷ್ಠೆಯಿಂದ ಸೇವೆ ಸಲ್ಲಿಸಿ ಗಮನಸೆಳೆದಿದ್ದಾರೆ.






