ಮೂಡುಬಿದಿರೆ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಹೊಸಂಗಡಿಯಲ್ಲಿ ಎಸ್‌.ಐ.ಆರ್. ಮಾಹಿತಿ ಕಾರ್ಯಾಗಾರ

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಮಾರೂರು – ಹೊಸಂಗಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಎಸ್.ಐ.ಆರ್.ಕುರಿತಾದ ಮಾಹಿತಿ ಕಾರ್ಯಾಗಾರವು ಶುಕ್ರವಾರ ನಡೆಯಿತು.


ಕಮಿಟಿಯ ಕಾರ್ಯದರ್ಶಿ, ನ್ಯಾಯವಾದಿ ಇರತಷಾದ್ ಎನ್.ಜಿ.ಅವರು ಎಸ್.ಐ.ಆರ್.ಕುರಿತು ಸಮಗ್ರವಾದ ಮಾಹಿತಿ ನೀಡಿದರು.
ಕಮಿಟಿಯ ಸದಸ್ಯ ಇಬ್ರಾಹಿಂ ಹಂಡೇಲ್, ಮಸೀದಿಯ ಖತೀಬರಾದ ಶರೀಫ್ ಫೈಝಿ, ಮಸೀದಿ ಕಮಿಟಿಯ ಅಧ್ಯಕ್ಷ ಖಾಲಿದ್, ಜಾವೆದ್, ರಝಾಕ್ ಅಭಿಮಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಮೀರ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top