ಯಾವುದೋ ಒಂದು ವಾಟ್ಸಾಪ್ ಗ್ರೂಪಲ್ಲಿ ಬಂದ ಸುದ್ಧಿಇದು. ಓದಿ ಸುಮ್ಮನಾಗಲು ಮನಸ್ಸಾಗಲಿಲ್ಲ. ಈ ಅಪರೂಪದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಇದು ಪಕ್ಕದ ಕಾಸರಗೋಡಿನಲ್ಲಿ ನಡೆದ ಘಟನೆ. ಅವರ ಹೆಸರು ನಾರಾಯಣ. ಆರೋಗ್ಯವಂತನಾಗಿದ್ದ ಕಾಲದಲ್ಲಿ ತನ್ನ ಪಕ್ಷಕ್ಕಾಗಿ ಸಾಕಷ್ಟು ಮುಸ್ಲಿಂ ವಿರೋಧವನ್ನು ಕಟ್ಟಿಕೊಂಡು ಓಡಾಡಿದ್ದವರು.ಪಕ್ಷ, ಸಂಘಟನೆ ಅಂತ ಮೂರಕ್ಷರದ ಪಕ್ಷಕ್ಕಾಗಿ ಬೆವರು ಸುರಿಸಿದ್ದಾತ.
ಕ್ಯಾನ್ಸರ್ ಬಾಧಿಸಿ ಶಕ್ತಿ ಕಳೆದುಕೊಂಡಾಗ ಪತ್ನಿ, ಮಕ್ಕಳು, ಕುಟುಂಬ ಅಂತ ಎಲ್ಕರೂ ದೂರ ಮಾಡಿದರು. ಯಾವ ಪಕ್ಷಕ್ಕಾಗಿ ಓಡಾಡಿದ್ದರೋ, ಬೆವರು ಸುರಿಸಿ ಸಂಘಟನೆ ಮಾಡಿದ್ದರೋ ಆ ಸಿದ್ದಾಂತದ ಪಕ್ಷವೂ ಮೂಸಿ ನೋಡಲಿಲ್ಲ.
ಬೀದಿಯಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಂಡದ್ದು ಕಾಸರಗೋಡಿನ ನಗರಸಭಾ ಸದಸ್ಯೆ,ಮುಸ್ಲಿಂ ಲೀಗಿನ ಇರ್ಫಾನಾ ಇಕ್ಬಾಲ್.ಆ ಸಂದರ್ಭದಲ್ಲಿ ಇರ್ಫಾನಾ ಅವರಿಗೆ ತನ್ನ ಪಕ್ಷ ಬೇರೆ- ಅವರ ಪಕ್ಷ ಬೇರೆ ಅನಿಸಲಿಲ್ಲ, ಅವರ ಧರ್ಮ ಬೇರೆ- ತನ್ನ ಧರ್ಮ ಬೇರೆ ಎಂಬ ಯೋಚನೆಯೇ ಬರಲಿಲ್ಲ. ಅವರಲ್ಲಿ ಮೂಡಿದ್ದು ಮತ್ತು ಎಲ್ಲರೂ ಮಾಡಬೇಕಾದ ಮಾನವೀಯತೆ ಮಾತ್ರ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾರಾಯಣ ಮೃತಪಟ್ಟರು. ಆಗಲೂ ಕುಟುಂಬದವರ್ಯಾರೂ ಬಾರದೇ ಇದ್ದಾಗ ಚೆರುಗೋಳಿಯ ಸಾರ್ವಜನಿಕ ಸ್ಮಶಾನಕ್ಕೆ ಸಾಗಿಸುವ ವ್ಯವಸ್ಥೆಯನ್ನೂ ಮಾಡಿದ್ದರು.
ಅಂತಿಮವಾಗಿ ನಾರಾಯಣರ ವಿಧಿವಿಧಾನ ನೆರವೇರಿಸಲೂ ಯಾರೂ ಇಲ್ಲದಾದಾಗ ಜಾತಿ,ಧರ್ಮ ಯಾವುದೂ ಯೋಚಿಸದೆ ತನ್ನ ಕೈಯಿಂದಲೇ ಅಗ್ನಿ ಸ್ಪರ್ಷ ಮಾಡಿದ್ದು ಅದೇ ಬುರ್ಖಾಧಾರಿಣಿ ಇರ್ಫಾನಾ.
ಇದು ಯಾವಾಗ ನಡೆದಿದ್ದೋ ಗೊತ್ತಿಲ್ಲ. ಜಾತಿ ಧರ್ಮ ಅಂತ ವಿಭಜಿಸಲೆತ್ನಿಸುವ ಬುದ್ಧಿಒಂತೆರಿಗೆ ಈ ಘಟನೆ ಮಾನವೀಯ ಪಾಠವನ್ನು ಹೇಳಿಕೊಟ್ಟಿದೆ.






