ಸೂರಿ ಮಾರ್ನಾಡ್ ಅವರಿಗೆ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿ

Picture of Namma Bedra

Namma Bedra

Bureau Report

ಸೂರಿ ಮಾರ್ನಾಡ್ ಎಂದೇ ಖ್ಯಾತರಾಗಿರುವ ಪಡುಮಾರ್ನಾಡಿನ ಸುರೇಂದ್ರ ಕುಮಾರ್ ಮಾರ್ನಾಡ್ ಅವರು ಮುಂಬೈ ಅಂಧೇರಿಯ ಕರ್ನಾಟಕ ಸಂಘವು ನೀಡುವ ” ಶ್ರೇಷ್ಠ ಹೊರನಾಡ ಕನ್ನಡಿಗ” ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದಾರೆ.


ಅಮನೊಟ್ಟು ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೈನ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದ ಬಳಿಕ ಮುಂಬೈಯತ್ತ ತೆರಳಿದ ಅವರು ಉಳಿದ ವಿದ್ಯಾಭ್ಯಾಸವನ್ನು ಮುಂಬೈಯಲ್ಲಿ ಪೂರೈಸಿದರು.
ಕಲಾವಿದರಾಗಿ,ನಿರ್ದೇಶಕರಾಗಿ,ಕಲಾ ಪೋಷಕರಾಗಿ ಸಾಕಷ್ಟು ಕಲಾ ಕಾರ್ಯಕ್ರಮಗಳನ್ನು ಸಂಘಟಿಸಿರುವ ಸೂರಿ ಮಾರ್ನಾಡ್ ಅವರ ಕಲಾಸೇವೆಯನ್ನು ಗುರುತಿಸಿ ಅಂಧೇರಿಯ ಕರ್ನಾಟಕ ಸಂಘವು ಈ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
ಈ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಪಡುಮಾರ್ನಾಡು,ಮೂಡುಬಿದಿರೆಗೆ ಕೀರ್ತಿ ತಂದಿರುವ ಸೂರಿ ಮಾರ್ನಾಡ್ ಅವರಿಗೆ ಅವರ ಸನ್ಮಿತ್ರ ರಮೇಶ್ ಶೆಟ್ಟಿ ಪಡುಮಾರ್ನಾಡ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top