ಅಲಂಗಾರು ಯುವಕನ ಡೌಟ್ ಫುಲ್ ಸಾವು *ಮನೆ ಪಕ್ಕದ ಶೆಡ್ ಬಳಿ ಶವ ಪತ್ತೆ

Picture of Namma Bedra

Namma Bedra

Bureau Report

ಮೂಡುಬಿದಿರೆ ಅಲಂಗಾರು ಸಮೀಪದ ಆಶ್ರಯ ಕಾಲನಿಯ ಯುವಕನೋರ್ವನ ಶವವು ಇಂದು ಬೆಳಿಗ್ಗೆ ಆತನ ಮನೆಯ ಶೆಡ್ ಪಕ್ಕದಲ್ಲಿ ಪತ್ತೆಯಾಗಿದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಸ್ಥಳೀಯ ಪರಿಸರದಲ್ಲಿ ಕೆಲವು ಅಂತೆಗಂತೆಗಳು ಹರಿದಾಡುತ್ತಿದೆ‌.


ಕಾರ್ತಿಕ್ ಶೆಟ್ಟಿ (34) ಮೃತಪಟ್ಟ ಯುವಕ.ಜೆಸಿಬಿ, ಹಿಟಾಚಿ ಹೊಂದಿದ್ದ ಕಾರ್ತಿಕ್ ಶೆಟ್ಟಿ ಅವಿವಾಹಿತ. ತಂದೆ,ತಾಯಿ, ಇಬ್ಬರು ಸಹೋದರರು ಇದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
ಯುವಕನಾಗಿರುವುದರಿಂದ ಈ ಅಸಹಜ ಸಾವಿನ ಬಗ್ಗೆ ಸಂಶಯ ಸಹಜ.ಅದೇ ಈಗ ಅಲಂಗಾರು ಪರಿಸರದಲ್ಲಿ ಹರಿದಾಡುತ್ತಿದ್ದು ಅದ್ಯಾರೋ ಇತ್ತೀಚೆಗೆ ಕಾರ್ತಿಕ್ ಶೆಟ್ಟಿಗೆ ಧಮ್ಕಿ ಹಾಕಿದ್ದ ವಿಷಯದ ಬಗ್ಗೆಯೂ ಚರ್ಚೆಯಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top