ಗ್ರೇಡ್ 1 ಅಧಿಕಾರಿಯಾಗಿ ಮುಂಬಡ್ತಿ ಪಡೆದ ನಮ್ಮೂರ ಯುವಕ!

Picture of Namma Bedra

Namma Bedra

Bureau Report

ಜಿನೇಂದ್ರ ಕೋಟ್ಯಾನ್. ಇಲಾಖೆಯಲ್ಲಿ ಈ ಯುವಕನಿಗೆ ಒಳ್ಳೆಯ ಹೆಸರಿದೆ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಸರ್ವರಿಂದಲೂ ‘ ಬೆಸ್ಟ್ ಆಫೀಸರ್’ ಎಂದು ಹೆಸರು ಗಳಿಸಿಕೊಂಡಿರುವ ಈತ ನಮ್ಮೂರ ಪಕ್ಕದ ಕಾಶಿಪಟ್ಣದ ಯುವಕ ಅಂತ ಹೇಳಿಕೊಳ್ಳಲು ಸಂತಸವಾಗುತ್ತದೆ.
ಕಾಶಿಪಟ್ಣ ಗ್ರಾಮದ ಬರಿಂಜ ಸೋಮಪ್ಪ ಪೂಜಾರಿ- ವಸಂತಿ ದಂಪತಿಯ ಪುತ್ರನಾಗಿರುವ ಜಿನೇಂದ್ರ ಕೋಟ್ಯಾನ್ ಶಾಲಾ ದಿನಗಳಿಂದಲೇ ಸಮಾಜಮುಖಿಯಾಗಿ ಗುರುತಿಸಿಕೊಂಡವರು.
ತನ್ನ ಕಠಿಣ ಪರಿಶ್ರಮ, ಶ್ರಮದ ಮೂಲಕ ಸರಕಾರಿ ಕೆಲಸ ಗಿಟ್ಟಿಸಿಕೊಂಡು ಪ್ರಸ್ತುತ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಸರಕಾರದ ಸವಲತ್ತುಗಳನ್ನು ಅರ್ಹರಿಗೆ ಸಿಗುವಂತೆ ಮಾಡಿರುವಾತ.
ಈತನ ಸೇವೆ, ನಿಷ್ಠೆ, ಪ್ರಾಮಾಣಿಕತೆಯನ್ನು ಪರಿಗಣಿಸಿರುವ ಸರಕಾರವು ಗ್ರೇಡ್ 2 ನಿಂದ ಗ್ರೇಡ್ 1 ಕ್ಕೆ ಮುಂಬಡ್ತಿ ನೀಡಿ ಆದೇಶಿಸಿದೆ. ಇದೀಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿಯೇ ಮುಂದುವರಿದಿದ್ದಾರೆ.
ಇಲಾಖೆಯಲ್ಲಿ ಇನ್ನಷ್ಟು ಒಳ್ಳೆಯ ಸ್ಥಾನಮಾನಗಳು ಸಿಗಲಿ, ಜಿನೇಂದ್ರ ಕೋಟ್ಯಾನ್ ಅವರಿಂದ ಇನ್ನಷ್ಟು ಸಾಧನೆಗಳಾಗಲಿ ಎಂಬ ಹಾರೈಕೆ.
– ಅಶ್ರಫ್ ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top