ಮೂಡುಬಿದಿರೆಯ ರತನ್ ಗ್ಯಾರೇಜ್ ಬಳಿ ಬುಧವಾರ ಸಂಜೆ ರಿಕ್ಷಾವೊಂದು ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಪ್ರಯಾಣಿಕ ಹೊರಗೆಸೆಯಲ್ಪಟ್ಟು ಮೃತಪಟ್ಟಿದ್ದಾರೆ.
ನಿವೃತ್ತ ಶಿಕ್ಷಕ, ಆರ್.ಎಸ್.ಎಸ್.ಕಾರ್ಯಕರ್ತ, ವೇಣುಗೋಪಾಲ ಕಾಲನಿ ನಿವಾಸಿ ಜಿ.ಕೆ.ಭಟ್ ಮೃತಪಟ್ಟವರು.
ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ರಿಕ್ಷಾ ಚಾಲಕ ಬ್ರೇಕ್ ಹಾಕಿದಾಗ ರಿಕ್ಷಾ ಪಲ್ಟಿಯಾಯಿತೆನ್ನಲಾಗಿದೆ.






