ಬೆದ್ರದ ಈ ಕ್ಯಾಂಟೀನಲ್ಲಿ ದುಡಿಯಲಾಗದ ವೃದ್ಧರಿಗೆ, ವಿಕಲಚೇತನರಿಗೆ ಊಟೋಪಚಾರ ಫ್ರೀ !

Picture of Namma Bedra

Namma Bedra

Bureau Report

ಕ್ಯಾಂಟೀನ್ ಸಣ್ಣದು.ಆದರೆ ಇದರ ಮಾಲಕರ ಮನಸ್ಸು ದೊಡ್ಡದು.
ಶ್ರೀ ಗಣೇಶ್ ಕ್ಯಾಂಟೀನ್ ಹೆಸರಿನ ಈ ಸಣ್ಣ ಕ್ಯಾಂಟೀನ್ ಬೆದ್ರದ ಮೆಸ್ಕಾಂ ಕಚೇರಿ ಪಕ್ಕದ ಬೆಳ್ತಂಗಡಿ ರಸ್ತೆಯ ಪಕ್ಕದಲ್ಲಿದೆ. ಇಲ್ಲಿ ದುಡಿಯಲಾಗದ ವೃದ್ಧರಿಗೆ ಮತ್ತು ವಿಕಲಚೇತನರಿಗೆ ಊಟೋಪಚಾರ ಫ್ರೀ.
ಪಕ್ಕದ ನಿವಾಸಿಯಾಗಿರುವ ಆನಂದ ಅವರು ಈ ಕ್ಯಾಂಟೀನ್ ನಡೆಸುತ್ತಿದ್ದಾರೆ. ಅಶಕ್ತರಿಗೆ ಹೊಟ್ಟೆ ತುಂಬಿಸಿ ಆನಂದ ಕಾಣುವ ಆನಂದರ ಈ ದಾನವು ಅವರ ಹೃದಯ ಸಿರಿವಂತಿಕೆಯನ್ನು ಹೆಚ್ಚಿಸಿದೆ.
ಕ್ಯಾಂಟೀನ್ ಪಕ್ಕದಲ್ಲಿ ಒಂದು ಬ್ಯಾನರ್ ಹಾಕಿರುವುದರಿಂದ ದಿನಂಪ್ರತಿ ಏಳೆಂಟು ಮಂದಿ ಬಂದು ಹೊಟ್ಟೆ ತುಂಬಿಸಿಕೊಂಡು ಕೈಮುಗಿದು ಹೋಗುತ್ತಿದ್ದಾರೆ.ಆನಂದರಿಗೆ ಅದಕ್ಕಿಂತ ದೊಡ್ಡ ಆನಂದ ಇನ್ನೇನು ಬೇಕು ?
ವ್ಯವಹಾರದ ಲೆಕ್ಕಾಚಾರದಲ್ಲೇ ಇರುವ ಇಂದಿನ ದಿನಗಳಲ್ಲಿ ಆನಂದರಂತವರು ಮಾತ್ರ ಅಪರೂಪ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top