ರಾಷ್ಟ್ರಪತಿಯವರಿಂದ ‘ತಳಮಟ್ಟದ ನವೋದ್ಯಮ ಗೌರವ’ ಸ್ವೀಕರಿಸಿದ ಮೂಡುಬಿದಿರೆಯ ಅನುಷಾ ಪ್ರಜ್ವಲ್ ಆಚಾರ್

Picture of Namma Bedra

Namma Bedra

Bureau Report

ರಾಷ್ಟ್ರಮಟ್ಟದಲ್ಲಿನ ತಳಮಟ್ಟದ ನಾವೀನ್ಯತೆಯ ಕೊಡುಗೆಗಾಗಿ ನೀಡಲಾಗುವ 2026 ನೇ ಸಾಲನ ತಳಮಟ್ಟದ ನವೋದ್ಯಮ ಗೌರವಕ್ಕೆ ಆಯ್ಕೆಯಾಗಿರುವ ಮೂಡುಬಿದಿರೆಯ ಅನುಷಾ ಪ್ರಜ್ವಲ್ ಆಚಾರ್ ಅವರಿಂದು ದೆಹಲಿಯಲ್ಲಿ ನಡೆದ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿಸದರು.
ರಾಷ್ಟ್ರಮಟ್ಟದಲ್ಲಿ ಕೊಡಮಾಡುವ ಈ ಗೌರವಕ್ಕೆ ದ.ಕ.ದಿಂದ ಆಯ್ಕೆಯಾಗಿದ್ದ ಇಬ್ಬರ ಪೈಕಿ ಅನುಷಾ ಒಬ್ಬರಾಗಿದ್ದರು.


ಬಾಣಂತನ ಸಂದರ್ಭದಲ್ಲಿ ನೀಡುವ ಲೇಹಾದಿ ಔಷಧಿಯನ್ನು ಪರಂಪರೆಯ ಲೇಹ,ಉಪಚಾರದ ಆಹಾರವಾಗಿ ನಾವೀನ್ಯತೆಯೊಂದಿಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನಕ್ಕೆ ಮುಂದಾದ ಅನುಷಾ ಆಚಾರ್ ಅವರು ಅದರಲ್ಲಿ ಯಶಸ್ಸನ್ನೂ ಕಂಡರು.ಅದಕ್ಕೆ ‘ಮಾವೇದಾಸ್’ ಎಂಬ ಹೆಸರನ್ನೂ ಇಟ್ಟರು.
ಅವರ ಮಾವೇದಾಸ್ ಭಾರತದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ ಕೊಡಮಾಡುವ ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆಯಾಗಿತ್ತು.
ಇಂದು ನಡೆದ ಸಮಾರಂಭದಲ್ಲಿ ಅವರು ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಹಿತ ಹಲವರು ಉಪಸ್ಥಿತರಿದ್ದರು.
ಮೂಲತ: ಕುಂದಾಪುರದವರಾಗಿರುವ ಅನುಷಾ ಆಚಾರ್ ಬನ್ನಡ್ಕದ ಎಸ್.ಕೆ.ಎಫ್.ಮುಖ್ಯಸ್ಥ ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಅವರ ಪತ್ನಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top