ಇರುವೈಲು ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾಗಿ ರೂಪಾ ರಾಜೇಶ್

Picture of Namma Bedra

Namma Bedra

Bureau Report

ಇರುವೈಲು ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಅಧ್ಯಕ್ಷರಾಗಿ ರೂಪಾ ರಾಜೇಶ್ ಆಯ್ಕೆ
ಮೂಡುಬಿದಿರೆ: ಇರುವೈಲು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ರೂಪಾ ರಾಜೇಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯು ಭಾನುವಾರ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ ಅವರನ್ನು ಗೌರವಾಧ್ಯಕ್ಷೆಯಾಗಿ ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪೂರ್ಣಿಮಾ ಹಾಗೂ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಸೌಮ್ಯ ಮತ್ತು ಕವಿತಾ, ಕೋಶಾಧಿಕಾರಿಗಳಾಗಿ ಅಮಿತಾ ಕಟ್ಟಣಿಗೆ ಮತ್ತು ವಿದ್ಯಾ ಪ್ರಶಾಂತ್, ಜತೆ ಕಾರ್ಯದರ್ಶಿಗಳಾಗಿ ಸ್ವಪ್ನಾ ಆಚಾರ್ಯ ಹಾಗೂ ಮಮತಾ ದಿನೇಶ್ ಕಟ್ಟಣಿಗೆ ಆಯ್ಕೆಯಾದರು.
ಲೆಕ್ಕಪರಿಶೋಧಕರಾಗಿ ಶರಣ್ಯ ಮತ್ತು ತಾರಾವತಿ, ಪೂಜಾ ಸಮಿತಿಗೆ ರೇಣುಕಾ, ವಿನುತಾ ಆಚಾರ್ಯ, ಧನಲಕ್ಷ್ಮೀ, ಸುರೇಖಾ ಶೆಟ್ಟಿ, ಸೌಮ್ಯ ಶೆಟ್ಟಿ ಮತ್ತು ಸೌಮ್ಯ ರಾಮಚಂದ್ರ ಅವರನ್ನು ನೇಮಕ ಮಾಡಲಾಯಿತು.
ಕೌಂಟರ್ ಸಮಿತಿಗೆ ಪೂರ್ಣಿಮಾ ಶೆಟ್ಟಿ, ಪ್ರಮೀಳಾ ಮತ್ತು ಸೇವಂತಿ, ಸ್ವಾಗತ ಸಮಿತಿಗೆ ಲಲಿತಾ ಹಾಗೂ ಹರಿಣಾಕ್ಷೀ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರದೀಪ್ ಶೆಟ್ಟಿ, ಐ. ರಾಘವೇಂದ್ರ ಭಟ್, ಪದ್ಮನಾಭ ಪೂಜಾರಿ ಹಾಗೂ ದೀಪ ದಿನೇಶ್ ಬಟಾರ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top