ಕಾಶಿಪಟ್ಣ ಮುಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿ ಕಮಿಟಿಯ ಮಾಜಿ ಅಧ್ಯಕ್ಷರಾದ ಕೆ.ಎಸ್.ಪುತ್ತುಮೋನು ಅವರು ನೆರವೇರಿಸಿದರು.
ಖತೀಬರಾದ ಅಬೂಬಕ್ಕರ್ ನಿಝಾಮಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಕಾರ್ಯದರ್ಶಿ ಪಿ.ಎಚ್.ಅಬ್ದುಲ್ ರಹ್ಮಾನ್, ಶಬೀರ್,ಸಿದ್ದೀಕ್, ಕೆ.ಎಸ್.ಇಸ್ಮಾಯಿಲ್, ಯೂಸುಫ್ ಹಾಜಿ, ಎಸ್.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಶಹದ್ ಮತ್ತಿತರರು ಉಪಸ್ಥಿತರಿದ್ದರು.
ಅಕ್ಬರ್ ಆಲಿ ಉಸ್ತಾದ್ ಸ್ವಾಗತಿಸಿದರು. ಎಸ್.ಕೆ.ಎಸ್.ಎಸ್.ಎಫ್.ಅಧ್ಯಕ್ಷ ಹಮೀದ್ ಕಾಶಿಪಟ್ಣ ಕಾರ್ಯಕ್ರಮ ನಿರೂಪಿಸಿದರು.







































