30 ರ ಸಂಭ್ರಮದ ಪಿಜತ್ತಕಟ್ಟೆ ಶ್ರೀ ಗಣೇಶೋತ್ಸವಕ್ಕೆ ಚಿತ್ರತಾರೆಯರ ದಂಡು

Picture of Namma Bedra

Namma Bedra

Bureau Report

ಮರೋಡಿಯ ಪಿಜತ್ತಕಟ್ಟೆ ಶ್ರೀ ಗಣೇಶೋತ್ಸವಕ್ಕೆ ಈ ವರ್ಷ ಮೂವತ್ತರ ಸಂಭ್ರಮ.ಜಯಶ್ರೀ ಹೋಟೆಲ್ ಮಾಲಕ ಸುರೇಶ್ ಅಂಚನ್ ಅಟ್ಲಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಗಣೇಶೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.14 ರಂದು ನಡೆಯಲಿರುವ ಈ ಉತ್ಸವದಲ್ಲಿ ಖ್ಯಾತ ಚಲನಚಿತ್ರ ನಟರಾದ ಗೋಲ್ಡನ್ ಸ್ಟಾರ್ ಗಣೇಶ್,ಲವ್ಲೀ ಸ್ಟಾರ್ ಪ್ರೇಮ್,ವಿನೀತ್ ಕುಮಾರ್, ಸಮತಾ ಅಮೀನ್, ಹಳದಿ ಲೋಹದ ಮನುಷ್ಯ ಎಂದೇ ಖ್ಯಾತರಾಗಿರುವ ಹಿರಿಯ ಕ್ರೀಡಾಪಟು ರಿಜ್ ಮೊನ್ ಮಿಥಾಲ್ ಅವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1-30 ರಿಂದ ನೃತ್ಯ ವಿಕಾಸ ಮೂಡುಬಿದಿರೆ ಇವರಿಂದ ನೃತ್ಯ ವೈವಿಧ್ಯ,2-30 ರಿಂದ ಮರೋಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ,ಸ್ಥಳೀಯ ಮಕ್ಕಳಿಂದ ಹಾಗೂ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ,3-30 ರಿಂದ ಹಿಪ್ ಬಾಯ್ಸ್ ನೃತ್ಯ ತಂಡ ಉಜಿರೆ ಇವರಿಂದ ನೃತ್ಯ ವೈವಿಧ್ಯ, ಸಂಜೆ 4-30 ರಿಂದ ಪ್ರಕಾಶ್ ತೂಮಿನಾಡ್,ದೀಪಕ್ ರೈ ಸಂಪಾಜೆ ನೇತೃತ್ವದ ಕಾಂತಾರ ಚಿತ್ರ ತಂಡದಿಂದ ‘ ತೆಲಿಕೆ ಬಂಜಿ ನಿಲಿಕೆ’ ಹಾಸ್ಯ ಕಾರ್ಯಕ್ರಮ, ಸಂಜೆ 5-30 ಕ್ಕೆ ಸಭಾ ಕಾರ್ಯಕ್ರಮ,6-30 ರಿಂದ ಕಲಾಕುಂಭ ಕಲಾವಿದೆರ್ ಕುಳಾಯಿ,ಕುಡ್ಲ ಇವರಿಂದ ಪರಮಾತ್ಮೆ ಪಂಜುರ್ಲಿ ಎಂಬ ಭಕ್ತಿಪ್ರಧಾನ ನಾಟಕ ಹಾಗೂ ರಾತ್ರಿ 10 ರಿಂದ ಕರ್ನಾಟಕ ಮತ್ತು ಕೇರಳ ರಾಜ್ಯದ ಪ್ರಸಿದ್ಧ ತಂಡಗಳು ಹಾಗೂ ಮಂಗಳೂರಿನ ಪಿಲಿ ತಂಡದಿಂದ ವೈಭವದ ಶೋಭಾಯಾತ್ರೆ ನಡೆಯಲಿದೆ.


ರಾಜ್ಯದಲ್ಲಿಯೇ ರಥದ ಮೂಲಕ ವಿಸರ್ಜನೆ ಮಾಡುವ ಗಣೇಶೋತ್ಸವ ಎಂದು ಪ್ರಸಿದ್ಧಿ ಪಡೆದಿರುವ ಪಿಜತ್ತಕಟ್ಟೆಯ ಶ್ರೀ ಗಣೇಶೋತ್ಸವಕ್ಕೆ ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ,ವಿವಿಧ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ,ಅನೇಕ ಮಂದಿ ರಾಜಕೀಯ ಮುಖಂಡರು, ಸಾಮಾಜಿಕ ಮುಖಂಡರು, ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ,ಯಾವುದೇ ಜಾತಿಮತಬೇಧವಿಲ್ಲದೆ ಸರ್ವರೂ ಸೌಹಾರ್ದಯುತವಾಗಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸುತ್ತಾರೆ,ಮೂವತ್ತನೇ ವರ್ಷದ ಶ್ರೀ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಅಂಚನ್ ಅಟ್ಲಬೆಟ್ಟು ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top