ರಾಜಕೀಯ ಹೊರತುಪಡಿಸಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ತುಳುಭಾಷೆ,ತುಳು ಸಂಸ್ಕೃತಿಯ ಬಗ್ಗೆ ಉಮಾನಾಥ ಕೋಟ್ಯಾನ್ ಅವರು ಮಾತನಾಡುವಷ್ಟು, ಮಾತನಾಡಿದಷ್ಟು ಚೆನ್ನಾಗಿ ಮಾತನಾಡಲು ಬೇರೆ ಯಾರಿಗೂ ಮಾತನಾಡಲು ಸಾಧ್ಯವಿಲ್ಲ. ಮಾತನಾಡುವವರಿರಬಹುದಾದರೂ ಕೋಟ್ಯಾನ್ ರಷ್ಟು ನಿರರ್ಗಳವಾಗಿ ಮಾತನಾಡಲು ಸಾಧ್ಯವಿಲ್ಲ.
ಶಾಸಕರಾಗುವುದಕ್ಕಿಂತ ಮುಂಚೆಯೂ ಇವರು ಚೆನ್ನಾಗಿ ಭಾಷಣ ಮಾಡುತ್ತಿದ್ದರು. ಇದೀಗ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ನಾರಾಯಣ ಗುರುಗಳ ಜನ್ಮದಿನದಂದು ಅವರು ಮಾತನಾಡಿರುವ ಮಾತುಗಳು ಸಖತ್ ವೈರಲ್ ಆಗಿದೆ.ಎಂದಿನಂತೆಯೇ ಅವರು ಹೇಳಬೇಕಾದದ್ದನ್ನು ನೇರವಾಗಿಯೇ ಹೇಳಿದ್ದಾರೆ.
ಅವರು ಮಾಡಿದ ಭಾಷಣದ ಕೆಲವು ಪಾಯಿಂಟ್ಸ್ ಗಳು:
*ನಾನೇ ನನ್ನ ತಾಯಿಯ ಜತೆಗೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋದಾಗ ನಮ್ಮನ್ನು ದೂರದಿಂದಲೇ ಒಂದು ಸುತ್ತು ಹಾಕಿಸಿದ್ದರು- ದೇವರನ್ನು ದೂರದಿಂದಲೇ ನೋಡಿ ಅಂತ.ಆಗ ನನ್ನ ತಾಯಿ ಹೇಳಿದ್ದು ನೆನಪಿದೆ-‘ ಇಲ್ಲಮಗ,ನಮಗೆಲ್ಲಾ ಒಳಗೆ ಹೋಗಲಿಕ್ಕಿಲ್ಲ,ನಾವೆಲ್ಲಾ ಹೊರಗಿನಿಂದಲೇ ದೇವರಿಗೆ ಕೈ ಮುಗಿಯಬೇಕು’ಅಂತ ಹೇಳಿದ್ದರು.
*ಹಾಗಾದರೆ ಹಿಂದುಳಿದವರಿಗೆ ದೇವರಿಲ್ಲವಾ ಅಂತ ಕೇಳಿದ್ರೆ ‘ದೇವರಿದ್ದಾರೆ,ನಮ್ಮಂತಹ ಜನರೇ ಕೆಲವೊಂದು ಕಟ್ಟುಪಾಡುಗಳನ್ನು ಮಾಡಿಕೊಂಡು ದೇವಸ್ಥಾನದೊಳಗೆ ಹೋಗಬಾರದು,ದಾರಿಯಲ್ಲಿ ಯಾರಾದರೂ ಮೇಲ್ವರ್ಗದವರು ಬರುವಾಗ ನಾವು ಗದ್ದೆಯಪಕ್ಕದಲ್ಲಿದ್ದರೆ ಗದ್ದೆಗೆ, ತೋಡಿನ ಬಳಿಯಿದ್ದರೆ ತೋಡಿಗೆ ಇಳಿಯಬೇಕು,ನಮ್ಮ ಗಾಳಿ ಕೂಡಾ ಅವರಿಗೆ ಸೋಂಕಬಾರದೆಂಬ ಸ್ಥಿತಿಯಲ್ಲಿದ್ದೆವು.
*ಕೇರಳ ರಾಜ್ಯದಲ್ಲಿ ಮಹಿಳೆಯರು ಮೈ ಮುಚ್ಚಿಕೊಳ್ಳಲು ರವಿಕೆ ಹಾಕುವಂತಿರಲಿಲ್ಲ,ಮೈ ತೋರಿಸಿಕೊಂಡು ಗಂಡಸರ ಲುಂಗಿಯ ಒಂದು ತುಂಡನ್ನೋ,ಕಂಬಾಯಿಯನ್ನೋ ಸುತ್ತಿಕೊಳ್ಳಬೇಕಿತ್ತು, ಅಂತಹ ಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಇಂತಹ ಒಬ್ಬ ಪುಣ್ಯಾತ್ಮ,ಯುಗಪುರುಷ ನಾರಾಯಣ ಗುರುಗಳ ಜನ್ಮವಾಯಿತು.ಅವರು ಈ ಎಲ್ಲಾ ಅಸಮಾನತೆ,ಅಸ್ಪ್ರಶ್ಯತೆಯನ್ನು ಕಂಡು ‘ ನಾವೆಲ್ಲಾ ದೇವರ ಮಕ್ಕಳು, ದೇವರಿಗೆ ತಾರತಮ್ಯವಿಲ್ಲ,ನಾವೇಕೆ ತಾರತಮ್ಯ ಮಾಡಬೇಕು? ಎಂದು ಹೇಳಿಕೊಂಡು ಅಂದಿನಿಂದಲೇ ಶಾಂತಿಯುತ ಹೋರಾಟವನ್ನು ಮಾಡಲು ಪ್ರಾರಂಭಿಸಿದರು.
*ಹಿಂದುಳಿದವರ್ಗದವರಿಗೆ ದೇವಸ್ಥಾನಕ್ಕೆ ಹೋಗಲಿಕ್ಕಿಲ್ಲ,ನಮಗೂ ಒಂದು ದೇವರು ಬೇಕಲ್ಲಾ? ಎಂದು ನದಿಯಲ್ಲಿ ಮುಳುಗಿ ತೀರ್ಥಸ್ನಾನ ಮಾಡಿ ಕೈಯಲ್ಲೊಂದು ಶಿವಲಿಂಗವನ್ನು ಎತ್ತಿಕೊಂಡು ಬರುತ್ತಾರೆ ಎನ್ನುವುದನ್ನು ನಾವೆಲ್ಲಾ ಓದಿದ್ದೇವೆ.
*ಆಗ ಎಲ್ಲರೂ ಹೇಳಿದರಂತೆ- ನೀವು ಹಿಂದುಳಿದವರು,ಶಿವನನ್ನು ನೀವು ಆರಾಧಿಸುವಂತಿಲ್ಲ’ಎಂದು. ಆಗ ‘ ಇದು ಹಿಂದುಳಿದವರ ಶಿವ, ನಿಮ್ಮ ಶಿವ ಅಲ್ಲ, ನಾವು ಇದನ್ನು ಪ್ರತಿಷ್ಠಾಪಿಸುತ್ತೇವೆ,ನೀವು ಕೂಡಾ ಬರಬಹುದು’ ಎಂದು ಹೇಳುತ್ತಾರೆ.
*ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸುವ ಮೂಲಕ ದೇವರನ್ನು ಹತ್ತಿರದಿಂದ ಕಾಣಬಹುದೆನ್ನುವುದಕ್ಕೆ ದಾರಿ ತೋರಿಸಿಕೊಟ್ಟವರೇ ನಾರಾಯಣ ಗುರುಗಳು.
*ವಾಹನಗಳಿಲ್ಲದ ಆ ಕಾಲದಲ್ಲಿ ಕೇರಳದಿಂದ ರೈಲಿನಿಂದ ಬಂದಿಳಿದು ನಡೆದುಕೊಂಡೇ ಇಲ್ಲಿಯವರೆಗೆ ಬಂದು ಆಗ ಹಿರಿಯರಾಗಿದ್ದ ಕೊರಗಪ್ಪ ಎಂಬವರಲ್ಲಿ ‘ ನಮಗೆ ಇಲ್ಲೊಂದು ದೇವಸ್ಥಾನ ಮಾಡಬೇಕು,ನಮಗೆ ಈ ಜಾಗ ಬೇಕು’ ಎಂದು ಕೇಳಿಕೊಂಡಿದ್ದರು.
ಈ ಜಾಗ ಹಿಂದೆ ಕುದುರೆಗಳನ್ನು ತೊಳೆಯುವ ಕೊಳ ಅಥವಾ ಕೆರೆಯಾಗಿತ್ತು.ಇದೇ ಜಾಗ ಆಗಬಹುದೆಂದು ನಿರ್ಧರಿಸಿ ಅವರೇ ಪ್ರತಿಷ್ಠಾಪಿಸಿದ ದೇವಸ್ಥಾನದ ವಠಾರದಲ್ಲಿಂದು ನಾವೆಲ್ಲಾ ಸೇರಿದ್ದೇವೆ,ಇದು ನಮ್ಮ ಭಾಗ್ಯ.
*ಬೇಸರದ ಸಂಗತಿಯೆಂದರೆ ನಮ್ಮ ಸಮಾಜದ ತುಂಬಾ ಜನ ನಾರಾಯಣ ಗುರುಗಳ ಜಯಂತಿಯಂದು ಭಾಗವಹಿಸುವುದಿಲ್ಲ, ಜಿಲ್ಲಾಡಳಿತ, ಸರಕಾರ ಈ ಕಾರ್ಯಕ್ರಮವನ್ನು ಮಾಡಬೇಕೆಂದು ಹೇಳುತ್ತಾರೆ, ಸರಕಾರ ಅವಕಾಶ ಮಾಡಿಕೊಟ್ಟರೂ ನಮ್ಮ ಸಮಾಜದವರು ಭಾಗವಹಿಸುತ್ತುಲ್ಲ, ನಮ್ಮ ಸಮಾಜ ಮಾತ್ರವಲ್ಲ, ಎಲ್ಲ ಸಮಾಜದವರೂ ನಾರಾಯಣ ಗುರುಗಳ ಜಯಂತಿಯಂದು ಭಾಗವಹಿಸಬೇಕು,ಅದೇ ನಾವು ಗುರುಗಳಿಗೆ ಕೊಡುವ ನಿಜವಾದ ಗುರುಕಾಣಿಕೆ.







































