ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಮೂಡುಬಿದಿರೆ ಶಾಖೆ ಉದ್ಘಾಟನೆ

Picture of Namma Bedra

Namma Bedra

Bureau Report

ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಅಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಏಳನೇ ಶಾಖೆಯಾಗಿರುವ ಮೂಡುಬಿದಿರೆ ಶಾಖೆಯನ್ನು ಭಾನುವಾರ ಬೆಳಿಗ್ಗೆ ಡಾ.ಎಂ.ಮೋಹನ ಆಳ್ವ,ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮಾಜಿ ಸಚಿವರಾದ ಕೆ.ಅಭಯಚಂದ್ರ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸುದರ್ಶನ ಎಂ,ಎಂ‌.ಬಾಹುಬಲಿ ಪ್ರಸಾದ್‌, ಉದ್ಯಮಿ ಕೆ.ಶ್ರೀಪತಿ ಭಟ್,ಮೂಡುಬಿದಿರೆ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಪ್ರೇಮಾನಂದ ಕೆ.ಎಸ್.ಸಹಿತ ಅನೇಕ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಿ ನೂತನ ಶಾಖೆಗೆ ಶುಭ ಹಾರೈಸಿದರು.
ಉಪಾಧ್ಯಕ್ಷರಾದ ಕೆ‌.ದಿನೇಶ್ ರಾವ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದನ್ ಕೋಟೆಗಾರ್, ಮೂಡುಬಿದಿರೆ ಶಾಖೆಯ ಪ್ರಬಂಧಕಿ ಚಂದ್ರಿಕಾ ಹಾಗೂ ಸಿಬ್ಬಂದಿಗಳು, ರಾಜೇಶ್ ಕೋಟೆಗಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top