ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಹಳೆವಿದ್ಯಾರ್ಥಿನಿ ರೇಶ್ಮಾ ಪೂಜಾರಿ (45) ಅವರು ಶುಕ್ರವಾರ ಮುಂಬಯಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
1995-96 ನೇ ಸಾಲಿನ ವಿದ್ಯಾರ್ಥಿನಿಯಾಗಿದ್ದ ರೇಶ್ಮಾ ಅವರು ಪೆರಾಡಿಯ ಕೊರಗಪ್ಪ ಪೂಜಾರಿ-ಲಲಿತಾ ದಂಪತಿಯ ಪುತ್ರಿ.
ಹೈಸ್ಕೂಲ್ ಮುಗಿಸಿದ ಬಳಿಕ ಮುಂಬಯಿಗೆ ತೆರಳಿ ಅಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದ ರೇಶ್ಮಾ ಅವರು ಮುಂಬಯಿಯಲ್ಲಿ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದರೆನ್ನಲಾಗಿದೆ.
ಅವಿವಾಹಿತರಾಗಿದ್ದ ಅವರು ಮುಂಬಯಿಯಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದರು.
ಅವರ ನಿಧನಕ್ಕೆ ಶಿಕ್ಷಕರು, ಹಳೆವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.








































