ವೇಣೂರು ಶಾಂತಿನಗರದ ನೆಲ್ಲಿಗುಡ್ಡೆ ನಿವಾಸಿ,ಶತಾಯುಷಿ ಖತೀಜಮ್ಮ(100) ಅವರು ಶನಿವಾರ ನಿಧನರಾದರು.
ಮೂಡುಬಿದಿರೆ ಸುಪ್ರೀಂ ಫೂಟ್ ವೇರ್ ಮಾಲಕ ಎನ್.ಜಿ.ಹಮೀದ್,ಎನ್.ಜಿ.ಅಬೂಬಕ್ಕರ್ ಸಹಿತ ಇಬ್ಬರು ಪುತ್ರರು,ಮೂವರು ಪುತ್ರಿಯರು ಹಾಗೂ ಮೊಮ್ಮಗ,ಮೂಡುಬಿದಿರೆಯ ಯುವ ವಕೀಲರಾದ ಎನ್.ಜಿ.ಇರ್ಷಾದ್ ಅವರನ್ನು ಅಗಲಿದ್ದಾರೆ.











