ಪುರಸಭಾ ಮಾಜಿ ಸದಸ್ಯ,ಜಿಗರ್ ಮೈಂಡ್ ತಂಡದ ಮಾಲಕ ಇಕ್ಬಾಲ್ ಕರೀಮ್ ಅವರ ಮುಂದಾಳುತ್ವದಲ್ಲಿ ಲಾಡಿ ಬೊಗ್ರುಗುಡ್ಡೆ ಪಕ್ಕದ ಗದ್ದೆಯಲ್ಲಿ ಇತ್ತೀಚೆಗೆ ನಡೆದ ‘ಕೆಸರ್ದ ಗೊಬ್ಬು’ ನಲ್ಲಿ ವಿಶಾಲ್ ನಗರ ತಂಡವು ವಿವಿಧ ಆಟಗಳಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದಿದೆ.
ಸುಲ್ತಾನ್ ಕೋಟೆಬಾಗಿಲು ತಂಡವು ದ್ವಿತೀಯ ಸ್ಥಾನ ಪಡೆದಿದ್ದು ವಿವಿಧ ಸ್ಪರ್ಧೆಗಳಲ್ಲಿ ಈ ಭಾಗದ ಹಲವಾರು ಮಂದಿ ಭಾಗವಹಿಸಿದ್ದರು.
ಎಂ.ಸಿ.ಎಸ್.ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪುರಸಭಾ ಮಾಜಿ ಸದಸ್ಯ ಪುರಂದರ ದೇವಾಡಿಗ ಮತ್ತಿತರರು ಭಾಗವಹಿಸಿ ಶುಭಹಾರೈಸಿದರು.
ಸಂಯೋಜಕ ಇಕ್ಬಾಲ್ ಕರೀಮ್ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ವಂದಿಸಿದರು.











