ತುಳು ಭಾಷೆ 8 ನೇ ಪರಿಚ್ಚೇದಕ್ಕೆ ಸೇರಲು ಕಂಬಳವೂ ಕಾರಣವಾಗಲಿದೆ: ಕೋಟ್ಯಾನ್

Picture of Namma Bedra

Namma Bedra

Bureau Report

ತುಳುನಾಡಿನ ಜನಪದ ಕ್ರೀಡೆಯಾಗಿರುವ ಕಂಬಳಕ್ಕೆ ಇಂದು ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರಕಿದೆ,ಹಿಂದೆಲ್ಲಾ ಪಾರಂಪರಿಕವಾಗಿ ಅಲ್ಲಲ್ಲಿ ನಡೆಯುತ್ತಿದ್ದ ಕಂಬಳಕ್ಕಿಂದು ಆಧುನಿಕ ಸ್ಪರ್ಶ ಸಿಕ್ಕಿದ್ದು ತುಳುಭಾಷೆ ಎಂಟನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಲು ತುಳುನಾಡಿನ ಜನಪ್ರಿಯ ಕ್ರೀಡೆಯಾಗಿರುವ ಕಂಬಳವೂ ಕಾರಣವಾಗಬಲ್ಲದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಮಿಯ್ಯಾರು ವತಿಯಿಂದ ನಡೆಯುತ್ತಿರುವ ಕಂಬಳ ತರಬೇತಿ ಶಿಬಿರವನ್ನು ಕಡಲಕೆರೆಯ ಸೃಷ್ಟಿ ಗಾರ್ಡನ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಂಬಳ ಕಲಕಂಬುಲವಾಗಬಾರದೆನ್ನುವ ಉದ್ದೇಶದಿಂದ ಗುಣಪಾಲ ಕಡಂಬ ಅವರ ಉಸ್ತುವಾರಿಯಲ್ಲಿ ಕಳೆದ ಏಳು ವರ್ಷಗಳಿಂದ ಈ ತರಬೇತಿ ಶಿಬಿರ ನಡೆಯುತ್ತಿದೆ,ಕಂಬಳದಲ್ಲಿ ಶಿಸ್ತು,

ಸಮಯಪಾಲನೆ,ವ್ಯವಸ್ಥೆ ಹೇಗಿರಬೇಕೆನ್ನುವುದು ಶಿಬಿರದಲ್ಲಿ ತಿಳಿಯಲಿದೆ,ಶಿಬಿರಾರ್ಥಿಗಳು ಇದರ ಪ್ರಯೋಜನ ಪಡದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು,ಈ ತರಬೇತಿಯಿಂದ ಉತ್ತಮ ಭವಿಷ್ಯವಿದೆ,ಅದನ್ನು ಉಪಯೋಗಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಅದಾನಿ ಗ್ರೂಪ್ ನ ಆಡಳಿತ ನಿರ್ದೇಶಕ ಕಿಶೋರ್ ಆಳ್ವ,ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಬೆಳುವಾಯಿ ಸದಾನಂದ ಶೆಟ್ಟಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಕಂಬಳ ಕೋಣಗಳ ಯಜಮಾನರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ರಂಜಿತ್ ಪೂಜಾರಿ ತೋಡಾರ್, ಸಮಿತಿಯ ಸುಭಾಶ್ಚಂದ್ರ ಚೌಟ,ಜ್ವಾಲಾ ಪ್ರಸಾದ್, ಉಮೇಶ್ ಕರ್ಕೇರಾ ಪುತ್ತೂರು, ಅಲ್ಲಿಪಾದೆ ಆದಿರಾಜ ಜೈನ್,ತರಬೇತುದಾರ ಜೋನ್ ಸಿರಿಲ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಅಕಾಡೆಮಿಯ ಸಂಚಾಲಕರಾದ ಕೆ.ಗುಣಪಾಲ ಕಡಂಬ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ‘ 10 ದಿವಸಗಳ ಕಾಲ ನಡೆಯಲಿರುವ ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ 120 ಮಂದಿಯ ಪೈಕಿ 40 ಮಂದಿ ಶಿಬಿರಾರ್ಥಿಗಳು ಉಳಿದಿದ್ದಾರೆ,ಕಂಬಳ ಕ್ಷೇತ್ರದ ವಿವಿಧ ಅನುಭವಗಳಿಂದ ಎಲ್ಲಾ ರೀತಿಯ ತರಬೇತಿ ನೀಡಲಾಗುವುದು ಎಂದರು.
ಉದ್ಘೋಷಕ ರವೀಂದ್ರ ಕುಮಾರ್ ಕುಕ್ಕುಂದೂರು ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top