ನವೆಂಬರ್ 7 ರಂದು ನಡೆಯಲಿರುವ ಜಿಲ್ಲೆಯ ಮೊದಲ ಪಣಪಿಲ ಕಂಬಳದ ಸಿದ್ದತಾ ಸಭೆಯು ಭಾನುವಾರ ಕಂಬಳ ಕರೆಯ ಬಳಿ ನಡೆಯಲಿದ್ದು ಕಂಬಳದ ಎಲ್ಲಾ ವಿಭಾಗಗಳೂ ಈಬಾರಿ ಪಣಪಿಲದ ಕಂಬಳದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ.ಪಣಪಿಲ ಅವರು ತಿಳಿಸಿದ್ದಾರೆ.


ಕಂಬಳ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳದ ಯಶಸ್ಸಿಗೆ ಯಾವರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಬೇಕೆನ್ನುವುದರ ಕುರಿತು ಚರ್ಚಿಸಲಾಯಿತು.
ಈವರೆಗೆ ನಡೆದ ಕಂಬಳಗಳಲ್ಲಿ ಗ್ರಾಮಸ್ಥರು ನೀಡಿರುವ ವಿಶೇಷ ಸಹಕಾರವನ್ನು ಸ್ಮರಿಸಿಕೊಂಡು ಈಬಾರಿಯೂ ಕಂಬಳದ ಯಶಸ್ಸಿಗೆ ಗ್ರಾಮಸ್ಥರ ಸಹಕಾರವನ್ನು ಯಾಚಿಸಲಾಯಿತು.
ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ,ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ,ಕಂಬಳದ ಮಹಾಪೋಷಕರಾದ ಶ್ರೀಮತಿ ಹೇಮಾ ಕೆ.ಕೆ.ಪೂಜಾರಿ,ಮುನಿರಾಜ್ ಹೆಗ್ಡೆ,ದೇವರಾಜ್ ಸಾಲ್ಯಾನ್, ರಮಾನಾಥ ಸಾಲ್ಯಾನ್ ವಿ.ಎಸ್, ಮತ್ತಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











