ಬಂಟರ ಸಂಘ, ಬಂಟರ ಮಹಿಳಾ ಸಂಘದ ವತಿಯಿಂದ ಸೀನಿಯರ್ ಸಿಟಿಝನ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ

Picture of Namma Bedra

Namma Bedra

Bureau Report

ಬಂಟರ ಸಂಘ ಮೂಡುಬಿದಿರೆ, ಬಂಟರ ಮಹಿಳಾ ಘಟಕ ಮೂಡುಬಿದಿರೆ ಹಾಗೂ ಛಾಯಾ ಗ್ರಾಮವನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 2.10.2026ರಂದು ಸಮಾಜ ಮಂದಿರ ಸಭಾ ದಲ್ಲಿ ಸೀನಿಯರ್ ಸಿಟಿಜನ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್ ಹೆಗ್ಡೆ ಯವರು ವಹಿಸಿದ್ದರು. ಅತಿಥಿಗಳಾಗಿ ಬಂಟರ ಸಂಘ ದ ಕಾರ್ಯದರ್ಶಿಗಳಾದ ಶ್ರೀ ಸುಚರಿತ ಶೆಟ್ಟಿ ಉಪಾಧ್ಯಕ್ಷರಾದ ಶ್ರೀ ಚೇತನ್ ಕುಮಾರ್ ಶೆಟ್ಟಿ ಹಾಗೂ ಛಾಯಾ ಗ್ರಾಮವನ್ ಮುಖ್ಯಸ್ಥರಾದ ಶ್ರೀಮತಿ ಪ್ರಿಯಾ ಶೆಟ್ಟಿ , ಬಂಟರ ಸಂಘದ ಉಪ ಕಾರ್ಯದರ್ಶಿಗಳಾದ ಶ್ರೀ ಶಿವಪ್ರಸಾದ್ ಹೆಗ್ಡೆ , ಮಹಿಳಾ ಘಟಕದ ಕಾರ್ಯದರ್ಶಿಗಳಾದ ಶ್ರೀಮತಿ ಸಂಗೀತಾ ಶೆಟ್ಟಿ , ಕೋಶಾಧಿಕಾರಿಗಳಾದ ಶ್ರೀಮತಿ ಗೀತಾ ಪಿ ಶೆಟ್ಟಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು..

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top