ಇತಿಹಾಸ ಪ್ರಸಿದ್ಧ ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ತೋಡಾರು ಮಖಾಂ ಉರೂಸ್ ಜನವರಿ 8 ರಿಂದ 16 ರ ವರೆಗೆ ನಡೆಯಲಿದೆ ಎಂದು ತೋಡಾರು ಬದ್ರಿಯಾ ಸುನ್ನೀ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಹಾಜಿ ಅವರು ತಿಳಿಸಿದ್ದಾರೆ.
ಎರಡು ವರ್ಷಕ್ಕೊಮ್ಮೆ ನಡೆಯುವ ತೋಡಾರ್ ಉರೂಸ್ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.











