ಉಡುಪಿ ಮೂಲದ ದುಬೈನ ಪ್ರಮುಖ ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಅವರು ಪ್ರಸ್ತುತಪಡಿಸುತ್ತಿರುವ ‘ಡಾ.ಮೋಹನ್ ಎಂ.ಬಿ.ಬಿ.ಎಸ್’ ತುಳು ಚಲನಚಿತ್ರದ ಚಿತ್ರೀಕರಣವು ಮುಕ್ತಾಯ ಹಂತದಲ್ಲಿದ್ದು ಚಿತ್ರೀಕರಣದ ಅಂತಿಮ ಹಂತವು ( ಹೊರಾಂಗಣ ಚಿತ್ರೀಕರಣ) ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಪ್ರಾರಂಭಗೊಳ್ಳಲಿದ್ದು ಈ ವರ್ಷದ ಅಂತ್ಯದ ವೇಳೆಗೆ ಚಿತ್ರವು ಬಿಡುಗಡೆಗೆ ಸಿದ್ದವಾಗಲಿದೆ.


ಒಬ್ಬ ಸಮರ್ಪಿತ ವೈದ್ಯನ ಸುತ್ತ ಹೆಣೆಯಲಾದ ಈ ಚಿತ್ರವು ಉತ್ತಮ ಕಥಾವಸ್ತುವನ್ನು ಹೊಂದಿದೆ.
ಉತ್ತಮವಾದ ಸಂಗೀತ, ಭಾವನೆಗಳು,ನೈತಿಕ ವೈದ್ಯಕೀಯ ಪದ್ದತಿ ಹಾಗೂ ವೈದ್ಯಕೀಯ ಮಾಫಿಯಾದ ಅಂಶಗಳೂ ಈ ಚಿತ್ರದಲ್ಲಿದೆ.
ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕರಾಗಿರುವ ವೆಂಕಟ್ ಭಾರದ್ವಾಜ್ ಅವರು ‘ಅಮೃತ ಫಿಲ್ಮ್ಸ್’ ಬ್ಯಾನರ್ ನಡಿ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ- 2022’ ಪುರಸ್ಕೃತರಾದ,ಮೂಡುಬಿದಿರೆ ಮೂಲದ, ಪುಣೆ ನಿವಾಸಿ ಡಾ.ಸುಧಾಕರ ಶೆಟ್ಟಿ ಅವರ ಯೋಜನೆಯಲ್ಲಿ ಈ ಚಿತ್ರವು ನಿರ್ಮಾಣಗೊಳ್ಳುತ್ತಿದೆ.












